ಕುಂದಾಪುರ.ಕಾಮ್ ಕುಂದನಾಡಿನ ಸಾಂಸ್ಕೃತಿಕ, ಧಾರ್ಮಿಕ, ಜನಪದ ಪರಂಪರೆಯ ದ್ಯೋತಕವಾಗಿ ಸದ್ಯದಲ್ಲೇ ಅನಾವರಣಗೊಂಡು ಜಗತ್ತನ್ನೇ ಬೆಸೆಯಲಿದೆ.
ಕನ್ನಡದ ಕುಲಕೋಟಿಗಳಿಗೆ ಗೌರವಪೂರ್ವಕ ಪ್ರಣಾಮಗಳು. ಪುಣ್ಯನದಿ ಪಂಚಗಂಗಾವಳಿಯ ತಟದಲ್ಲಿ ಮೈದಾಳಿ ನಿಂತಿರುವ ವೈಶಿಷ್ಟ್ಯಪೂರ್ಣ ಪುಣ್ಯಭೂಮಿ ಕುಂದಾಪುರ, ಈ ಪುಣ್ಯಭೂಮಿಯ ವೈಶಿಷ್ಟ್ಯಪೂರ್ಣ ಸಂಸ್ಕೃತಿಯನ್ನು ಕುಂದಾಪುರ.ಕಾಮ್ ಮೂಲಕ ಪಸರಿಸಲು ನಾವು ಉತ್ಸುಕರಾಗಿದ್ದೇವೆ. ಇದಕ್ಕಾಗಿ ಕ್ಷಣಗಣನೆ ಪ್ರಾರಂಭವಾಗಿದ್ದು,ಸದ್ಯದಲ್ಲೇ ಕುಂದಾಪುರ.ಕಾಮ್ ಕುಂದನಾಡಿನ ವೈವಿಧ್ಯಮಯ ಸಂಸ್ಕೃತಿಯ ಅಸ್ಮಿತೆಯಾಗಿ ನಿಮ್ಮೆದರು ಅನಾವರಣಗೊಳ್ಳಲಿದೆ.
ಕುಂದಾಪುರ.ಕಾಮ್ ಬಹುಮುಖಿ ಸಂಸ್ಕೃತಿಯ ದರ್ಪಣವಾಗಿದ್ದು, ಸೃಜನಶೀಲ ವಿಚಾರ ಚಿಂತನೆಗಳ ಕೈ ಗನ್ನಡಿಯಾಗಲಿದೆ
ಕುಂದಾಪುರ.ಕಾಮ್ ನ ಮೌಲಿಕತೆಯ ಉತ್ಕರ್ಷಕ್ಕಾಗಿ ಸಾಮಾಜಿಕ ಅಧ್ಯಯನ, ಗ್ರಾಮ ಅಧ್ಯಯನ, ಜನಾಂಗೀಯ ಅಧ್ಯಯನ, ಆರಾಧನಾ ಕೇಂದ್ರಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳು, ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಚಿತ್ರಣ, ಸಾಹಿತ್ಯ, ಜನಪದ ಮಾನವಿಕ, ವಿಜ್ಞಾನ, ಕಲೆ, ಸಂದರ್ಶನ, ಚಾರಣ, ವ್ಯಕ್ತಿಚಿತ್ರ, ಪ್ರಚಲಿತ ವಿದ್ಯಮಾನಗಳು, ವಾರ್ತೆಗಳು, ಕಥೆ, ಕವಿತೆ, ಚಿಂತನದಂತ ಬರಹಗಳು ಕುಂದಾಪುರ.ಕಾಮ್ ನಲ್ಲಿ ಬಿತ್ತರಗೊಳ್ಳಲಿದೆ. ಕುಂದನಾಡಿನ ಜನಮಾನಸದ ಜೀವಸೆಲೆಯಾಗಿ ಪಡಿಮೂಡುವ ಕುಂದಾಪುರ.ಕಾಮ್ ನ್ನು ಸಮಸ್ತ ಕುಂದಾಪುರ ನಾಗರಿಕರಿಗೆ ಅರ್ಪಿಸುತ್ತಿದ್ದೇವೆ. ತಮ್ಮೆಲ್ಲರ ಪ್ರೀತಿಯ ಪರಿಪೂರ್ಣ ಹಾರೈಕೆ ಕುಂದಾಪುರ.ಕಾಮ್ ಮೇಲಿರಲಿ ಎಂದು ಕಳಕಳಿಯಿಂದ ವಿಜ್ಞಾಪಿಸಿಕೊಳ್ಳುತ್ತೇವೆ.
ಸಾಹಿತ್ಯಾಸಕ್ತರು ತಮ್ಮ ಲೇಖನ, ಕಥೆ, ಕವಿತೆ ಮತ್ತು ಚಿತ್ರಕಲಾ ಪ್ರಕಾರವನ್ನು ಕುಂದಾಪುರ.ಕಾಮ್ ನಲ್ಲಿ ಪ್ರಕಟಪಡಿಸಲು ಅವಕಾಶವಿದೆ.
ಸರ್ವರೂ ಸಹಕರಿಸಿ, ಹರಸಿ, ಹಾರೈಸಬೇಕಾಗಿ ಕಳಕಳಿಯ ಪ್ರಾರ್ಥನೆ.
Team
www.kundapura.com
Sign in to your account