ಕುಂದೇಶ್ವರ ಕೆರೆಯ ಧ್ಯಾನಸ್ಥ ಶಿವ

kundapuradotcom@gmail.com
2 Min Read

ಪಂಚಗಂಗಾವಳಿಯ ತಟದಲ್ಲಿ ವಿರಾಜಮಾನವಾಗಿರುವ ಕುಂದಾಪುರಕ್ಕೆ ಕುಂದಾಪುರ ಎಂಬ ಹೆಸರು ಬರಲು ಮೂಲ ಕಾರಣ ಶ್ರೀ ಕುಂದೇಶ್ವರ ದೇವಸ್ಥಾನ ಕುಂದವರ್ಮ ರಾಜನಿಂದ ನಿರ್ಮಾಣಗೊಂಡಿರುವ ಈ ದೇಗುಲ ಇತಿಹಾಸ ಪ್ರಸಿದ್ಧ ಪರಮ ಪವಿತ್ರ ಪುಣ್ಯ ಕ್ಷೇತ್ರ.

ಈ ದೇಗುಲದ ಕೆರೆ ಕುಂದೇಸ್ರ ಕೆರೆ ಎಂದೇ ಕುಂದಗನ್ನಡದ ಆಡುಭಾಷೆಯಲ್ಲಿ ಕರೆಯಲ್ಪಡುತ್ತದೆ ಹಲವು ವರ್ಷಗಳ ಕಾಲ ಈ ಕೆರೆ ಸರ್ವತ್ಯಾಜ್ಯಗಳ ಆಗರವಾಗಿತ್ತು ಎಷ್ಟರ ಮಟ್ಟಿಗೆ ಎಂದರೆ ಕುಂದಾಪುರ ಪರಿಸರದ ಜನರು ಜಗಳವಾಡುವ ಸಂಧರ್ಭದಲ್ಲಿ ಕುಂದೇಸ್ರ ಕೆರೆಗೆ ಹಾರ್ ಎಂಬ ಬೈಗುಳ ಪದ ಉಪಯೋಗಿಸುತ್ತಿದ್ದರು ಅಂತಹ ಸಾಂಧರ್ಭಿಕ ಸನ್ನಿವೇಶದ ಅನೆಪೇಕ್ಷಿತ ಘಟನೆಗಳು ಇಲ್ಲಿ ನಡೆದಿದ್ದವು ಇದೆನ್ನೆಲ್ಲಾ ಮನಗಂಡ ದೇಗುಲದ ಆಡಳಿತ ಮಂಡಳಿ ಕುಂದೇಶ್ವರ ಕೆರೆಗೆ ಹೊಸ ರೂಪ ಕೊಡುವ ಪ್ರಯತ್ನವಾಗಿ ಕೆರೆಯ ಹೂಳೆತ್ತಿ ನೀರನ್ನು ಶುಚಿಗೊಳಿಸಿ ಕೆರೆಯ ಸುತ್ತ ಮುತ್ತ ಪ್ರದಕ್ಷಿಣ ಪಥ ಸಮೇತ ದಂಡೆಯನ್ನು ದುರಸ್ತಿಗೊಳಿಸಲಾಯಿತು.

ಕೆರೆಗೆ ಪಾವಿತ್ರ್ಯತೆಯ ಕಾಯಕಲ್ಪ ನೀಡಲು ಕೆರೆಯ ನೀರನ್ನು ಬತ್ತಿಸಿ ಮಧ್ಯ ದಲ್ಲಿ ಬಲಿಷ್ಠವಾದ ಕಾಂಕ್ರೀಟ್ ಕಂಬವನ್ನು ಸ್ಥಾಪಿಸಿ ಅದರ ಮೇಲೆ ಕಲ್ಲು ಬಂಡೆಯ ಆಕೃತಿಯನ್ನು ನಿರ್ಮಿಸಿ ಜಟೆಯಲ್ಲಿ ಗಂಗೆಯನ್ನು ಧರಿಸಿದ ಶಿವನ ಸುಂದರವಾದ ವಿಗ್ರಹವನ್ನು ಕಟೆದು ಸ್ಥಾಪಿಸಲಾಯಿತು ಜಟೆಯ ಗಂಗೆಯ ಬಾಯಿಂದ ನಿರಂತರವಾಗಿ ನೀರು ಬರುವಂತೆ ಮಾಡಲಾಯಿತು ಈ ಶಿವನ ವಿಗ್ರಹ ರಚನೆ ತಾಂತ್ರಿಕ ಕೌಶಲ್ಯ ಪೂರ್ಣವಾಗಿದ್ದು ಜಲದ ಮಧ್ಯೆಯೇ ಧ್ಯಾನಸ್ಥ ಶಿವನಿಗೆ ಪ್ರತಿನಿತ್ಯವೂ ಜಲಾಭಿಷೇಕ ಕೆರೆಯ ಸುತ್ತಮುತ್ತ ಕಟ್ಟಲಾದ ಸುಭದ್ರ ಕಂಪೌಂಡ್ ಅದರಲ್ಲಿ ಕಲಾತ್ಮಕ ಚಿತ್ರಗಳು ಆಕರ್ಷಕ ಗೋಪುರ ರಾತ್ರಿ ವೇಳೆ ಕಣ್ಣು ಕೋರೈಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುವ ಕುಂದೇಶ್ವರ ಕೆರೆ ಕುಂದಾಪುರದ ಪ್ರಮುಖ ಆಕರ್ಷಣೆ ಯಾಗಿದೆ.

ಕುಂದೇಶ್ವರ ದೀಪೋತ್ಸವದ ದಿನ ಇಲ್ಲಿ ವಿಶೇಷವಾಗಿ ಅಲಂಕಾರ ಮಾಡುತ್ತಾರೆ ಈ ವಿಗ್ರಹವನ್ನು ಶಿವಮೊಗ್ಗದ ಖ್ಯಾತ ಶಿಲ್ಪಿ ನಾರಾಯಣ ರಾವ್ ನಿರ್ಮಿಸಿದರು ಇವರು ಮುರ್ಡೆಶ್ವರದ ಶಿವನ ಮೂರ್ತಿ ಮತ್ತು ಕುಂದಾಪುರ ಹಂಗ್ಳೂರಿನ ಅಂಜನೇಯ ಮೂರ್ತಿಯನ್ನೂ ಕೂಡಾ ನಿರ್ಮಿಸಿದ್ದಾರೆ ಕುಂದೇಶ್ವರ ಕೆರೆಯ ಮಧ್ಯೆ ರಾರಾಜಿಸುವ ಈ ಧ್ಯಾನಸ್ಥ ಶಿವನ ಮೂರ್ತಿ ಕುಂದಾಪುರದ ಪ್ರಮುಖ ಆಕರ್ಷಣೆಯಾಗಿದೆ.

ಉಮಾಕಾಂತ ಖಾರ್ವಿ ಕುಂದಾಪುರ

Share This Article
Leave a Comment