ಕೋಡಿತಲೆಯಲ್ಲಿ ಮೂರನೇ ವಾರದ ಹಸಿರು ಜೀವ ಅಭಿಯಾನ
ಕೋಡಿಕನ್ಯಾನ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ, ಗೀತಾನಂದ ಫೌಂಡೇಶನ್ ಮಣೂರು ಹಾಗೂ ಪಂಚವರ್ಣ ಸಂಘಟನೆ ಕೋಟ ಇವರ ಸಂಯೋಜನೆಯೊಂದಿಗೆ, ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ , ಪಂಚಶಕ್ತಿ ಸಂಘ ಕೋಡಿತಲೆ ಇವರ ಸಹಕಾರದೊಂದಿಗೆ ಮೂರು ತಿಂಗಳ ಪರಿಸರಸ್ನೇಹಿ “ಹಸಿರು ಜೀವ” 2ನೇ ವರ್ಷದ ಕೊನೆಯ ಭಾನುವಾರದ ಅಭಿಯಾನವನ್ನು ಕೋಡಿಕನ್ಯಾನ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಗೀತಾ ಖಾರ್ವಿ ಯವರು, ಕೋಡಿತಲೆ ಭಾಗದಲ್ಲಿ ಮನೆಯಿಂದ ಮನೆಗೊಂದು ಗಿಡ ನೀಡುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣ ಪೂಜಾರಿಯವರು ಈ ಕಾರ್ಯಕ್ರಮ ಮಾಡುವದರಿಂದ ಆಗುವ ಅನುಕೂಲತೆಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರಾದ ಪ್ರಭಾಕರ್ ಮೆಂಡನ್, ಪಂಚಶಕ್ತಿ ಸಂಘದ ಕಾರ್ಯದರ್ಶಿ ಸಂದೀಪ ಖಾರ್ವಿ, ಸದಸ್ಯರಾದ ಅನಿಲ್ ಖಾರ್ವಿ , ವಿಕೇಶ್ ಬಂಗೇರ ಸಂಜೀವಿನಿ ಸಂಘದ ಎಲ್.ಸಿ.ಆರ್.ಪಿ. ಆಶಾದೇವಿ, ಪಶುಸಖಿ ಮಾಲತಿ , ಸ್ಥಳೀಯರಾದ ಪ್ರೀತ, ಜ್ಯೋತಿ , ಭರತ್ ಖಾರ್ವಿ, ಕುಮಾರಿ ಸುಚಿತ್ರ ಹಾಗೂ ಪುಟಾಣಿಗಳು ಉಪಸ್ಥಿತರಿದ್ದರು. ಪಂಚಶಕ್ತಿ ಸಂಘದ ಗೌರವಾಧ್ಯಕ್ಷ ಮಡಿ ವಿಶ್ವನಾಥ ಖಾರ್ವಿ ಅತಿಥಿಗಳಿಗೆ ಧನ್ಯವಾದ ವಿತ್ತರು. ,ಕೋಡಿತಲೆ ಅಂಗನವಾಡಿ ಕಾರ್ಯಕರ್ತೆ ಕುಮಾರಿ ನಿರೋಶ ಕಾರ್ಯಕ್ರಮ ನಿರ್ವಹಿಸಿದರು.
ವರದಿ: ಮಡಿ ವಿಶ್ವನಾಥ ಖಾರ್ವಿ
