ಅಪ್ಪ ಎಂದರೆ….

kundapuradotcom@gmail.com
0 Min Read

ಅಪ್ಪ ಎಂದರೆ....

ತಿನ್ನುವ ತುತ್ತಲ್ಲಿ
ಹಂಚಿಕೊಂಡ ಗಮ್ಮತ್ತು…….
ಮಾಸಲಿಲ್ಲ ಇನ್ನೂ
ಮನ ಸಾಗರದಲ್ಲಿ…..
ಕಡಲಿನ ಮಿಂಚು
ಹಸಿವಿನ ಸಂಚು…
ಎಲ್ಲವನ್ನು ಮೀರಿಸಿತ್ತು
ನಿನ್ನ ಕಾಯಕದ ಗತ್ತು…
ಹೊತ್ತು ಅರಳುವ ಮೊದಲೇ
ಹೊನ್ನಗುತ್ತಿರುವ ಅಂಬರದ ಜೊತೆಯಲೆ
ಸದ್ದಿಲ್ಲದೆ ಹೊತ್ತೊಯ್ಯುತ್ತಿದೆ ಬಲೆಯನ್ನು
ಕೂಸುಗಳ ಕಂಗಳಲ್ಲಿ ತುಂಬಲು ಛಲವನ್ನು…
ಅಪ್ಪ ಎಂದರೆ ಎನ್ನುವರು
ಎಲ್ಲರೂ ಆಕಾಶ..
ಆದರೆ…
ನಮ್ಮ ಪಾಲಿಗೆ ಅಪ್ಪ ಎಂದರೆ ಸಮುದ್ರ ಮತ್ತೇ ಸಮುದ್ರ ಮಾತ್ರ

ಅನುಪಮಾ .ಕೆ
Share This Article
Leave a Comment