ಕುಂದಾಪುರ: ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ
ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿ ವಿದ್ಯಾರಂಗ ಮಿತ್ರ ಮಂಡಳಿ (ರಿ)
ನಮ್ಮ ಕ್ಲಿನಿಕ್ ಖಾರ್ವಿಕೇರಿ ಕುಂದಾಪುರ ಇವರ ನೇತೃತ್ವದಲ್ಲಿ,
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ , ಉಚಿತ ಚರ್ಮರೋಗ ತಪಾಸಣಾ ಶಿಬಿರವು ಶ್ರೀ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ಜರುಗಿತು.
ಚರ್ಮರೋಗ ತಪಾಸಣಾ ಶಿಬಿರವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಖ್ಯಾತ ವೈದ್ಯರು H.O.D ಶ್ರೀಯುತ ಸತೀಶ್ ಪೈ ಅವರು ನಡೆಸಿಕೊಟ್ಟು ಚರ್ಮರೋಗದ ಮಾಹಿತಿಯನ್ನು ನೀಡಿದರು.
130 ಜನ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡರು.
ಶ್ರೀ ಮಹಾಕಾಳಿ ದೇವಸ್ಥಾನ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಪ್ರಕಾಶ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರಂಗ ಮಿತ್ರ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೋಹನ್ ಖಾರ್ವಿ,ವಿದ್ಯಾನಿಧಿ ಯೋಜನೆ ಅಧ್ಯಕ್ಷರಾದ ಶ್ರೀ ದಿನಕರ ಖಾರ್ವಿ, ಮಹಿಳಾ ಮತ್ತು ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ಲಲಿತಾ, ನಮ್ಮ ಕ್ಲಿನಿಕ್ ಖಾರ್ವಿಕೇರಿ ಇದರ ವೈದ್ಯರಾದ ಶ್ರೀ ವಿಘ್ನೇಶ್, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಡಾ.ಧ್ರುವಿ ಉಪಸ್ಥಿತರಿದ್ದರು. ರಾಜುರವರು ಸ್ವಾಗತಿಸಿ ವಂದಿಸಿದರು.
ವರದಿ: ಎಚ್.ಎನ್ ಚಂದ್ರಶೇಖರ ಖಾರ್ವಿ
