ನಮ್ಮ ಪ್ರತಿಷ್ಠಿತ ಕುಂದಾಪುರ ವಕೀಲರ ಸಂಘದ ಸದಸ್ಯರಾದ ಶ್ರೀಯುತ ರಮೇಶ್ ಹತ್ವಾರ್ ಮತ್ತು ಶ್ರೀಮತಿ ಸರಿತಾ ಹತ್ವಾರ್ ಇವರ ಮಗಳು ಕುಮಾರಿ ರಚಿತಾ ಹತ್ವಾರ್
ಕ್ರಿಕೆಟ್ ಕ್ಷೇತ್ರದಲ್ಲಿ ತನ್ನದೇ ಛಾಪು ಒತ್ತಿ ಕ್ರಿಕೆಟ್ ರಂಗದ ಮಿನುಗು ತಾರೆ ಯಾಗುವ ಎಲ್ಲಾ ಲಕ್ಷಣ ಗಳು ಕಾಣುತ್ತಿದೆ. ಈ ಬಾಲೆಯ ಸಾಧನೆಯ ಹಿಂದೆ ಆಕೆಯ ಅಹರ್ನಿಷಿ ಶ್ರಮ, ಗುರಿ ಎದ್ದು ಕಾಣುತ್ತಿದೆ. ಮುದ್ದು ಮಗಳ ಭವಿಷ್ಯ ಕ್ಕಾಗಿ ಅಪ್ಪ ಅಮ್ಮ ಪಟ್ಟ ಶ್ರಮ ಬೆಟ್ಟದಷ್ಟು. ಪ್ರತೀ ಹೆಜ್ಜೆಯಲ್ಲೂ ಈ ಮಗುವಿನ ಸಾಧನೆ ಆಕೆಯ ಗುರಿ ಏನು ಅಂತ ಸೂಚಿಸುತ್ತಿದೆ.
ಸ್ಪೋಟಕ ಬ್ಯಾಟಿಂಗ್, ಮಿಂಚಿನ ಫಿಲ್ಡಿಂಗ್, ಅಷ್ಟೇ ಆಕ್ರಮಣಕಾರಿ ಬೌಲಿಂಗ್…. ವಾವ್…. ಒಂದು ದಿನ ಕ್ರಿಕೆಟ್ ಮ್ಯಾಚ್ ಟಿವಿಯಲ್ಲಿ ನೋಡುತ್ತಿರುವಾಗ ಪ್ರತಿಯೊಬ್ಬರೂ ಉಸಿರು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಆ ಕ್ಷಣ ಬಂದೆ ಬರುತ್ತೆ. ಇದು ನಮಗೆ ಹೆಮ್ಮೆಯ ಸಂಗತಿಯೂ ಆಗಲಿದೆ.
ಅಚಾನಕ್ಕಾಗಿ ಕ್ರಿಕೆಟ್ ಎಂಬ ಆಟಕ್ಕೆ ಮನ ಸೋತಲೋ???? ಅಥವಾ ಆ ಕ್ರಿಕೆಟೇ ಈ ಬಾಲಕಿಯ ಅಂದದ ಚಂದದ ಆಟಕ್ಕೆ ಮನ ಸೋತಿತೋ…??? ಒಟ್ಟಾರೆ ರಚಿತಾ ಎಂಬ ಅಪ್ಪಟ ಪ್ರತಿಭೆ ತನ್ನ ಮನ ಮೋಹಕ ಆಟದಿಂದ ಸಮಸ್ತ ಜನರ ಗಮನ ಸೆಳೆದಿದ್ದಾಳೆ. ಆಟದ ಆ ಸ್ಟೈಲ್, ಚೀತಾ ಓಟದ ರಚಿತಾಳ ಆ ಚಾಣಕ್ಷ್ಯ ಆಟದ ಆಟ ಇಡೀ ಕ್ರಿಕೆಟ್ ಅಂಗಣವನ್ನೇ ಸಂಭ್ರಮ ಮಿಸುವಂತೆ ಮಾಡುತ್ತದೆ. ನಯನ ತುಂಬಾ ಕನಸುಗಳು. ಸಾಧಿಸದೇ ಇರಲಾರೆ ಎಂಬ ಹಠ…. ಇಲ್ಲಿತನಕ ತಂದು ಮುಟ್ಟಿಸಿದೆ. ಇದು ಖಂಡಿತ ಸಣ್ಣ ಸಾಧನೆ ಅಲ್ಲ. ಈ ಪ್ರಯತ್ನ ಶ್ರಮದ ಹಿಂದೆ ರಚಿತಾ ಮತ್ತು ತಂದೆ ತಾಯಿಯ ಬೆವರು ಕ್ರಿಕೆಟ್ ಅಂಗಣ ವನ್ನೇ ತೊಯ್ಯಿಸಿದೆ ಅಂದರೆ ತಪ್ಪಾಗಲಾರದು.

ಕ್ರಿಕೆಟ್ ಅಂದರೆ ಆಕೆಗೆ ಪಂಚ ಪ್ರಾಣ….
ಪಪ್ಪಾ ಒಂದಲ್ಲ ಒಂದು ದಿನ ನೀವು ನೋಡುತ್ತೀರಾ ನಿನ್ನ ಮಗಳ ಸಾಧನೆ…
ಎಸ್… ಆ ಮಾತು ಇಂದು ನನಸಾಗಿದೆ. ರಚಿತಾ ಹತ್ವಾರ್ ಎಂಬ ಕ್ರಿಕೆಟ್ ರಂಗದ ಭರವಸೆ ಮೂಡಿಸಿದ ಆಟಗಾರ್ತಿ ಕ್ರಿಕೆಟ್ ಅಂಗಣಕ್ಕೆ ಹೊಸ ಸ್ಪರ್ಶನೀಡಿದ್ದಾಳೆ. ಅದು ಕೋವಿಡ್ ದಿನ.. ಜಗತ್ತೇ ಮಕಾಡೆ ಮಲಗಿದ್ದ ಸಂಧಿಗ್ಧ ಪರಿಸ್ಥಿತಿಗೆ ಬಲಿಯಾದ ದಿನಗಳು…… ಆಗ ಮನೆಯಲ್ಲಿ ತಂದೆಯೊಂದಿಗೆ ಕ್ರಿಕೆಟ್ ಆಡುತ್ತಿದ್ದ ಮಗಳ ಕ್ರಿಕೆಟ್ ಪ್ರೀತಿ ಅರಿತ ತಂದೆ ರಮೇಶ್ ಹತ್ವಾರ್ ಮಗಳಲ್ಲಿ ಕ್ರಿಕೆಟ್ ಪ್ರೀತಿ ಇನ್ನೂ ಹೆಚ್ಚಿಸುತ್ತಾರೆ. ಕ್ರಿಕೆಟ್ ಆಟಗಾರರಾಗಿರುವ ರಮೇಶ್ ಹತ್ವಾರ್ ತನ್ನ ಮಗಳಿಗೆ ಕ್ರಿಕೆಟ್ ರಂಗದಲ್ಲಿ ಮುಂನ್ನೆಡೆಯಲು ಸಾಥ್ ನೀಡುತ್ತಾರೆ. ಒಳ್ಳೆಯ ತರಬೇತು ನೀಡುವಲ್ಲಿ ಯಶಸ್ವಿ ಆಗುತ್ತಾರೆ. ಬಟ್ಟಲುಗಂನ್ನಿಂದ ಕ್ರಿಕೆಟ್ ನೋಡಿ ಕನಸು ನೋಡುತಿದ್ದ ಬಾಲಕಿಯ ಕಂಗಳಲ್ಲಿ ತನ್ನ ಗುರಿ ದಾಖಲಾಗುತ್ತದೆ…. ಸಾಧಿಸುವ ಛಲ ಹೆಮ್ಮರವಾಗಿ ಬೆಳೆಯುತ್ತದೆ…. ತರಬೇತಿ ಮುಂದುವರಿಯುತ್ತದೆ.
ಇದೀಗ ಕ್ರಿಕೆಟ್ ಈ ಬಾಲಕಿ ಕಡೆ ವಿಶ್ವಾಸದಿ ನೋಡಿದೆ. ಓಪನಿಂಗ್ ಬ್ಯಾಟರ್ ಆಗಿ ರಚಿತಾ ಹತ್ವಾರ್ ಕ್ರಿಕೆಟ್ ಲ್ಲಿ ಸ್ಥಾನ ಗಿಟ್ಟಿಸಿದ್ದಾಳೆ. ಮಗಳ ಸಾಧನೆ ಹಿಂದೆ ಅಪ್ಪ ಅಮ್ಮನ ತ್ಯಾಗ ಪ್ರಶಂಸನಿಯ. ವ್ರತಿಯಲ್ಲಿ ವಕೀಲರು ಆಗಿರುವ ತಂದೆ ತಾಯಿ ತನ್ನ ಮಗಳ ಕ್ರಿಕೆಟ್ ಬದುಕಿಗೆ ಆಸರೆಯಾಗಿ ನಿಲ್ಲುತ್ತಾರೆ. ಅಪ್ಪ ಅಮ್ಮನ ನಂಬಿಕೆ ಹುಸಿ ಆಗದಂತೆ ರನ್ ಹೊಡೆಯುತ್ತಾಳೆ… ಬೌಲಿಂಗ್ ಮಾಡುತ್ತಾಳೆ… ವಿಕೆಟ್ ಕೀಪಿಂಗ್ ಮಾಡುತ್ತಾಳೆ… ಫೀಲ್ಡಿಂಗ್ ಮಾಡುತ್ತಾಳೆ…ಆಕೆಯ ಆಟ ನಿಜಕ್ಕೂ ಕಣ್ಣಿಗೆ ಹಬ್ಬವೇ ಸರಿ. ಆ ವೇಗ ಆ ಶೈಲಿ ಒಮ್ಮೆಲೇ ಸೆಳೆಯುತ್ತದೆ.
ದೇಶಕ್ಕಾಗಿ ಆಡಬೇಕು ಎನ್ನುವ ತವಕದಲ್ಲಿರುವ ರಚಿತಾ ತನ್ನ ಕಣ್ತುಂಬ ಹೊಂಗನಸು ತುಂಬಿ ಕೊಂಡಿದ್ದಾಳೆ. ಕ್ರಿಕೆಟ್ ನಲ್ಲಿ ವಿಶಿಷ್ಟ ಸಾಧನೆ ಮಾಡ ಬೇಕೆನ್ನುವ ಹಂಬಲದಲ್ಲಿರುವ ಈ ಹುಡುಗಿಗೆ ಕ್ರಿಕೆಟ್ ತಾನಾಗಿಯೇ ಒಲಿದಿದೆ. ಎಷ್ಟೇ ಕಷ್ಟವಾದರೂ ದಿಟ್ಟತನದಿಂದ ಸಾಧಿಸುವೆ ಎನ್ನುವ ಹುಡುಗಿಗೆ ಕ್ರಿಕೆಟ್ ಕ್ಷೇತ್ರ ಒಳ್ಳೆಯ ಅವಕಾಶಗಳನ್ನು ನೀಡಿ ಹರಸಲಿ..
ಮಗಳ ಕನಸನ್ನು ನನಸು ಮಾಡುವಲ್ಲಿ ಹತ್ವಾರ್ ದಂಪತಿಗಳ ತ್ಯಾಗ… ಆ ಸಂಕಲ್ಪ… ಆ ಆತ್ಮ ವಿಶ್ವಾಸ ನಿಜಕ್ಕೂ ಶ್ಲಾಘನಿಯ
ವಿಶ್ವ ಕ್ರಿಕೆಟ್ ಅಂಗಣದಲ್ಲಿ ಮುಂದೊಂದು ದಿನ ಕುಂದಾಪುರದ ಹೆಸರು ವಿಜೃಂಭಿಸಲಿದೆ….
ರವಿಕುಮಾರ್ ಗಂಗೊಳ್ಳಿ
ವಕೀಲರು.



