ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳು ಕೋಡಿ ಕುಂದಾಪುರ ಇದರ 40ನೇ ‘ಸ್ವಚ್ಛ ಕಡಲತೀರ-ಹಸಿರು ಕೋಡಿ’ ಅಭಿಯಾನವು ಆ.9ರಂದು ಜರುಗಿತು.
ಅರ್ಪಿತ ದತ್ತಾ, ರೀಫ್ ವಾಚ್ ಮರೈನ್ ಕನ್ಸರ್ವೇಷನ್ ನ ಸಂಯೋಜಕಿ ಅಭಿಯಾನವನ್ನುದ್ದೇಶಿಸಿ ಮಾತನಾಡಿ, ಬದುಕು ಎಂಬುದು ಬಹಳ ಚಿಕ್ಕದು ಆ ನೆಲೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಪರಿಸರದ ಕುರಿತ ಕಾಳಜಿ ಮೂಡಿಸುವುದು ಅತೀ ಅಗತ್ಯ ಕಾರ್ಯವಾಗಿದ್ದು ನಿರ್ಮಲ ಪರಿಸರದೊಂದಿಗೆ ಆರೋಗ್ಯವಂತ ಭಾರತವನ್ನು ಸೃಷ್ಟಿಸಬೇಕು. ಈ ಸ್ವಚ್ಛತಾ ಅಭಿಯಾನದ ಮೂಲಕ ಕೋಡಿ ಊರು ರಾಷ್ಟ್ರಮಟ್ಟದಲ್ಲಿ ಸ್ವಚ್ಛ ಗ್ರಾಮವಾಗಿ ಗುರುತಿಸಲ್ಪಡಲಿ ಎಂದು ಶುಭ ಹಾರೈಸಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿಶ್ವಸ್ಥ ಮಂಡಳಿ ಸದಸ್ಯ ಡಾ. ಆಸೀಫ್ ಬ್ಯಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಭಿಯಾನದಲ್ಲಿ ರೀಫ್ ವಾಚ್ ಮರೈನ್ ಕನ್ಸರ್ವೇಷನ್ ಸದಸ್ಯರಾದ ಪ್ರಶಾಂತ್ ಶೆಟ್ಟಿ, ರಚನಾ ಕೃಷ್ಣ ಹಾಗೂ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ವಿವಿಧ ಅಂಗ ಸಂಸ್ಥೆಗಳ ಶಾಲಾಭಿವೃದ್ಧಿ ಮತ್ತು ಸಲಹಾ ಮಂಡಳಿಯ ಸರ್ವಸದಸ್ಯರು, ಊರಿನ ಗಣ್ಯರು, ಪೋಷಕರು, ಬೋಧಕ ಬೋಧಕೇತರ ಸಿಬ್ಬಂದಿಗಳು ಮತ್ತು ಸಮೂಹ ಸಂಸ್ಥೆಗಳ 700 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಕನ್ನಡ ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು.





