ಪ್ರಕಾಶ್ ಶೇರಿಗಾರ್ ಗಂಗೊಳ್ಳಿ ಎಂಬ ಎಲೆ ಮರೆಯ ಕಲಾವಿದ

kundapuradotcom@gmail.com
2 Min Read

ಕುಂದಾಪುರ : ಹಲವಾರು ವರ್ಷ ಗಳಿಂದ ಗಂಗೊಳ್ಳಿ ಪ್ರಕಾಶ್ ಶೇರೀಗಾರ ಇವರ ಮಾಂತ್ರಿಕ ಕೈಗಳಲ್ಲಿ ವೈವಿಧ್ಯ ಮಯವಾದ ಗಣಪತಿ ಮೂರ್ತಿ ಮೂಡಿ ಬಂದು ಗಣೇಶ ಹಬ್ಬಕ್ಕೆ ಹೊಸ ಮೆರುಗು ನೀಡುತ್ತಾ ಬಂದಿದೆ.

ಇವರ ತಂದೆ ದಿ. ರಾಮಚಂದ್ರ ಶೇರೆಗಾರ್ ಪ್ರತಿಭಾವಂತ ಗಣೇಶ ಮೂರ್ತಿ ಕಲಾವಿದರು ಮತ್ತು ಅದ್ಭುತ ಕೊಳಲು ವಾದಕರು ಪ್ರಕಾಶ್ ಇವರಿಗೆ ಮೂರ್ತಿ ರಚನೆ ಕಲೆ ತಂದೆಯಿಂದ ಬಂದ ಬಳುವಳಿ ತಂದೆಯೊಡನೆ ಕುಳಿತು ರಾತ್ರಿ ಹಗಲು ಮೂರ್ತಿ ನಿರ್ಮಾಣ ದಲ್ಲಿ ತನ್ನನ್ನು ತೊಡಗಿಸಿ ಕೊಂಡ ಇವರಿಗೆ ಈ ಕಲೆ ಬಹು ಬೇಗನೇ ಒಲಿಯಿತು ಎಲ್ಲಾ ಸೂಕ್ಷ್ಮ ತೆ ಯನ್ನು ಅರಿತದಲ್ಲದೇ ತನ್ನದೇ ಆದ ಶೈಲಿ ಯನ್ನು ಬಳಸಿಕೊಂಡು ಗಣಪತಿ ಮೂರ್ತಿ ರಚಿಸಲಾರoಭಿಸಿದ ಪ್ರಕಾಶ್ ಶೇರಿಗಾರ್ ಚೌತಿ ಗಾಗಿ ಹಲವಾರು ಮೂರ್ತಿ ಮಾಡಿ ಕೊಡುತ್ತ ಎಲ್ಲರ ಪ್ರೀತಿ ಮೆಚ್ಚುಗೆಗೆ ಪಾತ್ರ ರಾದರು.

ತಂದೆಯ ನಂತರ ಈ ಜವಾಬ್ದಾರಿ ಯನ್ನು ವಹಿಸಿಕೊಂಡ ಪ್ರಕಾಶ್ ಪ್ರತೀ ವರ್ಷ ಈ ಕಲಾ ಸೇವೆಗೆ ತನ್ನನ್ನು ಪ್ರಾಮಾಣಿಕತೆ ಯಿಂದ ತೊಡಗಿಸಿ ಕೊಂಡಿಸಿದ್ದಾರೆ ಇವರ ಮನೆಯಲ್ಲಿಯೂ ಗಣಪತಿ ಹಬ್ಬದ ಮೆರುಗು ವಿಶೇಷ ವಾಗಿರುತ್ತದೆ.

ಪ್ರಕಾಶ್ ಇವರಲ್ಲಿ ತರಂಗ ವಾರ ಪತ್ರಿಕೆಯ ಅಪೂರ್ವ ಸಂಗ್ರಹ ಇದೆ ಆರಂಭ ಕಾಲದಿಂದ ಇಲ್ಲಿಯ ತನಕದ ಸಂಗ್ರಹ ಹುಬ್ಬೆರಿಸುತ್ತದೆ ಹವ್ಯಾಸ ಅಂದರೇ ಹಾಗೇ ತಾನೇ ಎಲ್ಲವೂ ವಿಶೇಷ ವಾಗಿರುತ್ತೆ ಇವರ ಗಣಪತಿ ಮೂರ್ತಿ ಮತ್ತು ಬಣ್ಣದ ಶೈಲಿ ಜತೆಗೆ ಮೂರ್ತಿ ಫಿನಿಶಿಂಗ್ ಶ್ಲಾಘನಿಯ.

ಪ್ರತಿಭಾವಂತ ಪ್ರಕಾಶ್ ಶೇರಿಗಾರ್ ತನ್ನ ಕಲೆಯ ಮೂಲಕ ತಂದೆಯ ಹೆಸರನ್ನು ಕೂಡ ದಿಗಂತದೇತ್ತರಕ್ಕೆ ಏರಿಸಿದ್ದಾರೆ. ಇವರ ತಂದೆಯ ಕೊಳಲು ವಾದನ ಅದ್ಭುತ ವೇ ಆಗಿತ್ತು ಸ್ವ ಪರಿಶ್ರಮ ದಿಂದ ಕಲಿತ ಆ ಕಲೆಗೆ ಗಂಗೊಳ್ಳಿ ಜನತೆ ಫಿಧಾ ಆಗಿ ಶ್ರೀ ರಾಮಚಂದ್ರ ಬಾಬಣ್ಣ ಶೇರಿಗಾರ್ ಇವರಿಗೆ ಸಾರ್ವಜನಿಕ ಸನ್ಮಾನ ಅಭಿನಂದನೆ ಸಮಾರಂಭ ಇಟ್ಟು ಕೊಂಡಿದ್ದರು. ದುರಾದ್ರಷ್ಟ ಎಂದರೆ ನಾಳೆಯ ಅಭಿನಂದನ ಸಮಾರಂಭ ಸಿದ್ಧತೆ ನಡೆಯುತ್ತಿರೂವಾಗ ಹಿಂದಿನ ರಾತ್ರಿ ಅದ್ಭುತ ಕಲಾವಿದ ಬಾಬಣ್ಣ ಮಲಗಿದ್ದಲ್ಲೇ ಹೃದಯ ಘಾತಕ್ಕೆ ಈಡಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರು.

ತಂದೆಯ ಮೂರ್ತಿ ರಚನೆ ಕಲೆಯನ್ನು ಮಗ ಪ್ರಕಾಶ್ ಶೇರಿಗಾರ್ ಮುಂದುವರಿಸಿಕೊಂಡು ಬಂದಿದ್ದಾರೆ. ಇವರಿಗೆ ಸಹೋದರರಾದ ಗಣೇಶ್, ಮುನ್ನಾ ಸಾಥ್ ನೀಡಿದ್ದಾರೆ. ಕಲೆಯ ಮನೆಯಲ್ಲಿ ಕಲಾವಿದರ ಸಂಭ್ರಮ ಮೊಳಗಿದೆ.

ರವಿಕುಮಾರ್ ಗಂಗೊಳ್ಳಿ

Share This Article
Leave a Comment