ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವ

kundapuradotcom@gmail.com
1 Min Read

ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರ ಸಂಘ ದ 17 ನೇ ವಾರ್ಷಿಕೋತ್ಸವವು ಅಧ್ಯಕ್ಷರಾದ ಶ್ರೀ ಬಿ. ಕುಶಕುಮಾರ್ ಇವರ ಸಾರಥ್ಯದಲ್ಲಿ ಕುಂದಾಪುರ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಕುಂದಾಪುರ ಇವರ ಸಭಾಭವನದಲ್ಲಿ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು.

ಬೆಳಿಗ್ಗೆಯಿಂದಲೇ ಸದಸ್ಯರ ಮಕ್ಕಳು ಚಿತ್ರಕಲೆ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹ ಭರಿತರಾಗಿ ಪಾಲ್ಗೊಂಡರು. ಈ ಚಿತ್ರಕಲೆ ಸ್ಪರ್ಧೆಯನ್ನು ರಾಧಾಕೃಷ್ಣ ಆಚಾರ್ ಗುಡ್ಡಟ್ಟು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು.

ಕುಂದಾಪುರದ ಜನಪ್ರಿಯ ಶಾಸಕರಾದ ಶ್ರೀ A ಕಿರಣ್ ಕುಮಾರ್ ಕೊಡ್ಗಿಯವರು, ದೀಪ ಪ್ರಜ್ಜಲಿಸುವ ಮೂಲಕ ಉದ್ಘಾಟಿಸಿದರು.

ಸಂಘದ ಸದಸ್ಯರಿರಾಗಿ ಸ್ಲೋ ಬೈಕ್ ರೇಸ್, ಮಡಕೆ ಒಡೆಯುವ ಸ್ಪರ್ಧೆ ನಡೆಯಿತು, ಈ ಸ್ಪರ್ಧೆಯನ್ನು ಗೌರವಾಧ್ಯಕ್ಷರಾದ ಶ್ರೀ ರಾಜೇಶ ಆಚಾರ್ಯ ಮರವಂತೆ ಇವರು ನಿರ್ವಹಿಸಿದ್ದರು.

ನಿಧಿಶೋದನೆ, ಸದಸ್ಯರ ಸ್ಮರಣಶಕ್ತಿ, ಈ ಎಲ್ಲಾ ಆಟೋಟಗಳು ನಡೆಯಿತು. ಈ ಸ್ಪರ್ಧೆಯನ್ನು ಸಂಘದ ಅಧ್ಯಕ್ಷರಾದ ಬಿ.ಕುಶಕುಮಾರ್ ಹಾಗೂ ಸಂತೋಷ ಆಚಾರ್ಯ ಸಾಸ್ತಾನ, ಇವರ ನೇತೃತ್ವದಲ್ಲಿ ನಡೆಯಿತು ಇದೇ ಸಂದರ್ಭದಲ್ಲಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಕುಂದಾಪುರ. ಇದರ ಸಭಾಭವನಕ್ಕೆ ರೂಪಾಯಿ ಒಂದು ಲಕ್ಷವನ್ನು ಚೆಕ್ ಮುಖಾಂತರ ನೀಡಲಾಯಿತು.

ಮಧ್ಯಾಹ್ನ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀ ವಸಂತ್ ಆಚಾರ್ಯ ಕೊಡಪಾಡಿ ಇವರ ನೇತೃತ್ವದಲ್ಲಿ ಸಂಘದ ಸದಸ್ಯರಾದ ಸದಾನಂದ ಆಚಾರ್ಯ ವಂಡ್ಸೆ, ಲಕ್ಷ್ಮಿ ನಾರಾಯಣ ಆಚಾರ್ಯ ಕುಂದಾಪುರ, ಪ್ರಕಾಶ್ ಶೆಟ್ ಕುಂದಾಪುರ ಹಾಗೂ ಸದಸ್ಯರ ಮನೆಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಗೀತ ಸೌರಭ ನಡೆಯಿತು.

Share This Article
Leave a Comment