ಕಂಚಿನ ಕಂಠದ ಕಾರ್ಯಕ್ರಮ ನಿರೂಪಕ ಕೆ.ಸಿ. ರಾಜೇಶ್

kundapuradotcom@gmail.com
3 Min Read

ಕೆ.ಸಿ. ರಾಜೇಶ್ ಎಂಬ ಕಂಚಿನ ಕಂಠದ ಪ್ರತಿಭಾವಂತ ಸುಂದರಾಂಗ ಕಾರ್ಯಕ್ರಮ ನಿರೂಪಕ, ನಿರೂಪಣೆ ಮೂಲಕ ಕಾರ್ಯಕ್ರಮದ ಕಳೆ ಏರಿಸುವ ಸರಳ ಸಜ್ಜನಿಕೆಯ ಮೋಡಿಯ ಮಾತುಗಾರ

ಆ ಕಂಠಕ್ಕೆ ಮೋಡಿ ಆಗದವರೇ ಇಲ್ಲ ನಿರರ್ಗಳ ಮಾತಿನ ಮಾತುಗಾರ ತನ್ನ ಅದ್ಭುತ ಧ್ವನಿ ಮತ್ತು ಅತ್ಯಾಕರ್ಷಕ ಭಾಷಾ ಪಾಂಡಿತ್ಯ ಮೂಲಕ ಪ್ರೇಕ್ಷಕ ಬಳಗವನ್ನು ಅವರ ಅರಿವಿಲ್ಲದೆ ಇನ್ನೊಂದು ಭವ್ಯ ಲೋಕಕ್ಕೆ ಎಳೆದೊಯ್ಯುತ್ತಾರೆ.

ನಿಜ ಹೇಳೋದಾದರೆ ಈ ಅದ್ಭುತ ಧ್ವನಿ ದೇವರ ಕೊಡುಗೆ ಎನ್ನಬಹುದು. with ಮೈಕ್ without ಮೈಕ್ ಇವರ ಧ್ವನಿ ಅದೇ ಧ್ವನಿ!!!!! no change…. ಮೈಕ್‌ಗೂ ಇವರ ಧ್ವನಿ ಅಂದರೇ ಬಲು ಪ್ರೀತಿ. ಇವರ ನಿರೂಪಣೆ ನೋಡಲೆಂದೆ ಬರುವ ಇವರ ಅಭಿಮಾನಿಗಳು ಇದ್ದಾರೆ ಯಾವುದೇ ಕಾರ್ಯಕ್ರಮ ಇರಲಿ ಇವರ ನಿರೂಪಣೆ ಇದ್ದರೆ ಅದು ಶಿಸ್ತು ಬದ್ದವಾಗಿ pin drop silenceನಲ್ಲಿ ನಡೆಯುತ್ತದೆ. ಧ್ವನಿ ಮಾತ್ರ ಅಲ್ಲ, ಇವರ ಸ್ಟೈಲ್ ಮತ್ತು ಶಿಸ್ತು ಅದರ ಜೊತೆಗೆ ವಿಶೇಷವಾಗಿ ಇವರ ಡ್ರೆಸ್ ಕೋಡ್ ಕೂಡ ಗಮನ ಸೆಳೆಯುತ್ತದೆ.

ಅಂದ ಹಾಗೇ ಈ ಸೆಲೆಬ್ರಿಟಿ ನಿರೂಪಕರ ಹೆಸರು ಕೆ.ಸಿ. ರಾಜೇಶ್ ಕುಂದಾಪುರ. ಇವರ ಅಭಿಮಾನಿಗಳ ಪ್ರಕಾರ ಇವರ ನಾಲಿಗೆಯಲ್ಲಿ ವಿದ್ಯಾ ದೇವತೆ ಸರಸ್ವತಿ ಆಸೀನಾರಾಗಿದ್ದಾರೆ ಎನ್ನುವ ಮೆಚ್ಚುಗೆಯ ಮಾತುಗಳು ಕೇಳಿದ್ದೇನೆ. ನಿಜ ಇರಬಹುದು ಅಂತಹ ಅದ್ಭುತ ಭಾಷ್ಯಾ ಶೈಲಿ ಇವರ ನಿರೂಪಣೆಯನ್ನು ಪಂಚಾಮೃತ ವನ್ನಾಗಿಸಿದೆ.

ಒಬ್ಬ ಉಪನ್ಯಾಸಕರಾಗಿ, ಪತ್ರಕರ್ತರಾಗಿ ಸಾಮಾಜಿಕ ವಲಯದಲ್ಲಿ ಇವರ ಪ್ರತಿಭೆ ಅನನ್ಯ ರಾಜ್ಯದೆಲ್ಲೆಡೆ ನಿರೂಪಣೆನಿಂದ ಗಮನ ಸೆಳೆದ ರಾಜೇಶ್ ಬೆಂಗಳೂರು ಹಬ್ಬದಲ್ಲಿಯೂ ನಿರೂಪಣೆ ಮೂಲಕ ಗಮನ ಸೆಳೆದಿದ್ದರು ರಾಜಕೀಯ ಕಾರ್ಯಕ್ರಮ ಇದ್ದರೆ ರಾಜಕೀಯ ನೇತಾರರರು ನಿರೂಪಣೆಗೆ ರಾಜೇಶ್ ಹೆಸರು ಸೂಚಿಸುತ್ತಾರೆ ಅಂದರೇ ಇದು ಅವರ ಪ್ರತಿಭೆ ಮತ್ತು ಶಿಸ್ತಿಗೆ ಜ್ವಲಂತ ಸಾಕ್ಷಿ ಆಗಿದೆ.

ರಸಮಂಜರಿ ಕಾರ್ಯಕ್ರಮದಲ್ಲಿಯೂ ನಿರೂಪಣೆ ಮಾಡಿದ ರಾಜೇಶ್ ಇತ್ತೀಚಿಗೆ ಅಪ್ಪಣ್ಣ ಹೆಗ್ಡೆ -90 ಭವ್ಯ ಕಾರ್ಯಕ್ರಮದ ನಿರೂಪಣೆಯಿಂದ ಇನ್ನೊಮ್ಮೆ ತನ್ನ ಪ್ರತಿಭೆ, ಸಾಮರ್ಥ್ಯ ಸಾಬೀತು ಪಡಿಸಿದರು. The Best MC ಎಂದು ಪ್ರಶಂಸೆಗೆ ಪಾತ್ರವಾ ಯಿತು. ಅಷ್ಟು ಚೆಂದವಾಗಿ ಮೂಡಿಬಂದ ನಿರೂಪಣೆಗೆ ಆಗಸದಲ್ಲಿನ ಚಂದಿರನೂ ಖುಷಿಪಟ್ಟ.

ನಿರೂಪಣೆ ಎಂದರೆ ರಾಜೇಶ್‌ಗೆ ಅದು ಒಂದು ಪವಿತ್ರ ಜವಾಬ್ದಾರಿ ತಪಸ್ಸಿನಂತೆ ಅದಕ್ಕೆ ಸಿದ್ದರಾಗಿ ವೇದಿಕೆ ಹತ್ತುತ್ತಾರೆ. ಗಂಭೀರತೆಯಿಂದ ಆ ಜವಾಬ್ದಾರಿ ನಿಭಾಯಿಸಿಕೊಂಡು ಹೋಗುವ ಆವರಲ್ಲಿ ನಿರೂಪಣೆ ಬಗ್ಗೆ ಇದ್ದ ಶ್ರದ್ದೆ, ಆಸಕ್ತಿ, ಜವಾಬ್ದಾರಿ ಎದ್ದು ಕಾಣುತ್ತದೆ. ಈ ಕ್ವಾಲಿಟಿ ಯಿಂದಲೇ ರಾಜೇಶ್ ಅತ್ಯುತ್ತಮ ನಿರೂಪಕರಾಗಿ ಜನ ಮನ್ನಣೆ ಗಳಿಸಿದರು. ಇವರ ಈ ಖ್ಯಾತಿಯ ಹಿಂದೆ ಅಹರ್ನಿಷಿ ಶ್ರಮ, ಶ್ರದ್ದೆ ಖಂಡಿತ ಇದೆ.

ಇಂದು ಸೆಲೆಬ್ರಿಟಿ ನಿರೂಪಕ ಎಂದು ಗುರುತಿಸಿಕೊಂಡಿರುವ ಕೆ.ಸಿ. ರಾಜೇಶ್ ನಿರೂಪಣೆ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಅದೆಷ್ಟೋ ಸೆಲೆಬ್ರಿಟಿಗಳೇ ಇಷ್ಟಪಡುವ ಸೆಲೆಬ್ರಿಟಿ ನಿರೂಪಕರಾಗಿ ಜನಪ್ರಿಯತೆಗಳಿಸಿದ್ದಾರೆ ಎಂದರೆ ಅದು ರಾಜೇಶ್ ಪ್ರತಿಭೆಗೆ ಸಿಕ್ಕ ಗೌರವ ಮತ್ತು ಅವರೆಲ್ಲರೂ ಇಟ್ಟ ನಂಬಿಕೆ ಮಾತ್ರ ಆಗಿರುತ್ತದೆ. ನಿರೂಪಣೆಗೆ ಹೊಸ ಭಾಷ್ಯಾ ಬರೆದ KCR ತನ್ನ ಶೈಲಿಯಲ್ಲಿ ಯಾರನ್ನೂ ಅನುಕರಿಸದೇ ತನ್ನದೇ ಸ್ವಂತಿಕೆಯಿಂದ ಗಮನ ಸೆಳೆದಿರುವುದು ಶ್ಲಾಘನೀಯ. ಟಿವಿ ನ್ಯೂಸ್ ರೀಡರ್ ಆಗಿ ಮಿಂಚುವ ಎಲ್ಲಾ ಲಕ್ಷಣಗಳು ಇವರಲ್ಲಿ ಇದ್ದರೂ ಆ ಅವಕಾಶಗಳು ಇವರಿಗೆ ಹುಡುಕಿ ಬಂದರೂ ತನ್ನ ಉಪನ್ಯಾಸಕ ವೃತ್ತಿಯಿಂದ ಅದನ್ನು ನಿರಾಕರಿಸಬೇಕಾಗಿ ಬಂತು. ವೃತ್ತಿ- ಪ್ರವೃತ್ತಿಯಲ್ಲಿ ಹೆಸರು ಮಾಡಿರುವ ಅತ್ಯುತ್ತಮ ವಾಗ್ಮಿ ಕೆ. ಸಿ. ರಾಜೇಶ್ ಇಂದು ನಿರೂಪಕರಾಗಿ ತನ್ನದೇ ಸ್ಟೈಲ್ ನಿಂದ ಬೆರಗು ಮೂಡಿಸಿದ್ದಾರೆ. ಮನರಂಜನಾ ಕಾರ್ಯಕ್ರಮವೆ ಕೆಲವೊಮ್ಮೆ ಸೋತಿರಬಹುದು. ಆದರೇ ಕೆ.ಸಿ. ರಾಜೇಶ್ ನಿರೂಪಣೆ ಎಂದಿಗೂ ಸೋಲಿಲ್ಲ… ದಟ್ಸ್ ಕೆ.ಸಿ.. ರಾಜೇಶ್.

ರವಿ ಕುಮಾರ್ ಗಂಗೊಳ್ಳಿ

Share This Article
Leave a Comment