ಸಮಾಜ ಸೇವಕ ದಿನೇಶ್ ಖಾರ್ವಿ ಗಂಗೊಳ್ಳಿ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ,ಜೈ ಭೀಮ್ ನೀಲಿ ಪಡೆ, ಗಂಗೊಳ್ಳಿ ಮನವಿ

kundapuradotcom@gmail.com
1 Min Read

ಸಮಾಜ ಸೇವಕ ದಿನೇಶ್ ಖಾರ್ವಿ ಗಂಗೊಳ್ಳಿ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ,ಜೈ ಭೀಮ್ ನೀಲಿ ಪಡೆ, ಗಂಗೊಳ್ಳಿ ಮನವಿ

ಕುಂದಾಪುರ: ಬೇರೆಯವರ ಜೀವ ಉಳಿಸಲು ತಮ್ಮ ಪ್ರಾಣದ ಹಂಗು ತೊರೆದು ಸಮಾಜಸೇವೆ ಮಾಡುತ್ತಿರುವ ಮುಳುಗು ತಜ್ಞ ಹಾಗೂ ಜೀವ ರಕ್ಷಕ ದಿನೇಶ್ ಖಾರ್ವಿ, ಲೈಟ್ ಹೌಸ್, ಗಂಗೊಳ್ಳಿ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ (ಜೈ ಭೀಮ್ ನೀಲಿ ಪಡೆ, ಗಂಗೊಳ್ಳಿ, ಕುಂದಾಪುರ, ಉಡುಪಿ ಜಿಲ್ಲೆ) ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ದಿನೇಶ್ ಖಾರ್ವಿ ಅವರು ಯಾವುದೇ ಜಾತಿ, ಪಂಥ, ಭೇದವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಕಳೆದ ಹಲವು ವರ್ಷಗಳಿಂದ ಸಮಾಜಸೇವೆ ಮಾಡುತ್ತಿದ್ದಾರೆ. ಅವರು ಇದುವರೆಗೆ ಸಮುದ್ರ, ನದಿ, ಜಲಪಾತ, ಬಾವಿ ಮತ್ತು ಕೆರೆಗಳಿಂದ 200 ಕ್ಕೂ ಹೆಚ್ಚು ಮೃತದೇಹಗಳನ್ನು ಮೇಲೆತ್ತಿ ಸಂಬಂಧಪಟ್ಟ ಕುಟುಂಬಗಳಿಗೆ ಹಸ್ತಾಂತರಿಸಿ ಮೃತರಿಗೆ ಮುಕ್ತಿ ನೀಡಿದ್ದಾರೆ. ಈ ಮೂಲಕ ಅವರು ನೊಂದ ಕುಟುಂಬಗಳಿಗೆ ಸಾಂತ್ವನ ನೀಡುವ ಮಹತ್ತರ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ದಿನೇಶ್ ಖಾರ್ವಿ ಅವರ ಈ ಅಪೂರ್ವ ಸಮಾಜ ಸೇವೆಯನ್ನು ಗುರುತಿಸಿ, ಅವರಿಗೆ 2025 ಪ್ರಸ್ತುತ ಸಾಲಿನ ಉಡುಪಿ ಜೆಲ್ಲೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಕೋರಿ ದಲಿತ ಸಂಘರ್ಷ ಸಮಿತಿಯ (ಜೈ ಭೀಮ್ ನೀಲಿ ಪಡೆ) ಪ್ರತಿನಿಧಿಗಳು ಹಾಗೂ ಕರ್ನಾಟಕ ಸರ್ಕಾರದ ಸಭಾಪತಿ ಸನ್ಮಾನ್ಯ ಶ್ರೀ ಯು.ಟಿ. ಖಾದರ್ ಫರೀದ್ ಅವರಿಗೆ ಲಿಖಿತ ಮನವಿ ಪತ್ರವನ್ನು ಸಲ್ಲಿಸಿದರು.

ಈ ಪತ್ರದಲ್ಲಿ, ದಿನೇಶ್ ಖಾರ್ವಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅವರಿಗೆ ಗೌರವ ನೀಡುವಂತೆ ಮನವಿ ಮಾಡಲಾಗಿದೆ.

ಸಮಿತಿಯು, ಇಂತಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಸಮಾಜಕ್ಕೆ ಪ್ರೇರಣೆಯಾಗಿದೆ ಮತ್ತು ಇತರರೂ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಲು ಇದು ಸ್ಫೂರ್ತಿಯಾಗಲಿದೆ ಎಂದು ಜೈ ಭೀಮ್ ನೀಲಿ ಪಡೆ ಗಂಗೊಳ್ಳಿ ಸಂಘಟನೆ ಸಂಚಾಲಕರಾದ ಜಗದೀಶ್ ಗಂಗೊಳ್ಳಿ ಯವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Share This Article
Leave a Comment