ರಾಜ್ಯ ಸರಕಾರದ ಶಾಲಾ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ (ರಾಜ್ಯ ಪಠ್ಯಕ್ರಮ) ಶಾಲೆಗಳಿಗೆ ಸೆ.20 ರಿಂದ ದಸರಾ ರಜೆ ಪ್ರಾರಂಭಗೊಳ್ಳಲಿದೆ. ಹಾಗೂ ಈ ರಜೆ ಅಕ್ಟೋಬರ್ 6ರ ವರೆಗೂ ಇರಲಿದೆ.
ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ ಶಾಲೆಗಳಿಗೆ ಸೆ.20 ರಿಂದ ಮಧ್ಯಾವಧಿ (ದಸರಾ ರಜೆ) ಪ್ರಾರಂಭಗೊಳ್ಳಲಿದೆ. ಅ.7 ರಿಂದ ಶಾಲೆಗಳು ಪ್ರಾರಂಭಗೊಳ್ಳಲಿದೆ.
ಅವಿಭಜಿತ ದ.ಕ.ಜಿಲ್ಲೆಯ ಸಿಬಿಎಸ್‌ಯ ಶಾಲೆಗಳಲ್ಲಿ ಸೆ.20 ರಿಂದ ಮಧ್ಯಾವಧಿ ರಜೆ ಆರಂಭಗೊಂಡು ಅ.2 ರವರೆಗೆ ಇರಲಿದ್ದು, ಅ.3 ರಿಂದ ತರಗತಿಗಳು ಪುನಃ ಆರಂಭಗೊಳ್ಳಲಿದೆ.
ಸಾಮಾನ್ಯವಾಗಿ ದಸರಾ ಹಬ್ಬದ ವೇಳೆ ಶಾಲೆಗಳಿಗೆ 15ರಿಂದ ಒಂದು ತಿಂಗಳಿಗಳ ಕಾಲ ರಜೆ ನೀಡಲಾಗುತ್ತದೆ. ಅದರಂತೆಯೇ ಈ ಬಾರಿಯೂ 18 ದಿನಗಳ ಕಾಲ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ. ಈ ರಜೆಯನ್ನು ಮಧ್ಯಂತರ ಪರೀಕ್ಷೆಗಳು ಮುಗಿದ ಬಳಿಕ ವಿದ್ಯಾರ್ಥಿಗಳಿಗೆ ಅಧಿಕೃತವಾಗಿ ಪ್ರಕಟ ಮಾಡಲಾಗುತ್ತದೆ.
ರಜೆಯ ನಡುವೆಯೂ ಶಿಕ್ಷಣ ಇಲಾಖೆ ಒಂದು ಪ್ರಮುಖ ಸೂಚನೆಯನ್ನ ಸಹ ನೀಡಿದೆ. ಅಕ್ಟೋಬರ್ 2ರಂದು ರಜೆ ಇದ್ದರೂ ಕೂಡ ಎಲ್ಲಾ ಶಾಲಾ ಮಕ್ಕಳು ಮತ್ತು ಶಿಕ್ಷಕರು ಶಾಲೆಗೆ ಕಡ್ಡಾಯವಾಗಿ ಹಾಜರಾಗಬೇಕು. ಯಾಕಂದ್ರೆ ಈ ದಿನ ದೇಶಾದ್ಯಂತ ಎಲ್ಲಾ ಶಾಲೆಗಳಲ್ಲೂ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆ ಮಾಡಲಾಗುತ್ತದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಮಾಡಲಾಗುತ್ತದೆ.
ಸಿಬಿಎಸ್‌ಇ ಕೆಲವು ಆಡಳಿತ ಮಂಡಳಿಗಳ ರಜಾ ಅವಧಿಯಲ್ಲಿ ವ್ಯತ್ಯಾಸ ಇರಬಹುದು ಎಂದು ವರದಿಯಾಗಿದೆ.
ದೀಪಾವಳಿ ಹಾಗೂ ಕ್ರಿಸ್ಮಸ್ ಸಂದರ್ಭದಲ್ಲಿ ರಜಾ ಕೊಡುವಾಗ ಕಡಿಮೆ ಮಾಡುವ ಸಾಧ್ಯತೆ ಕೂಡಾ ಇದೆ. ವಿದ್ಯಾರ್ಥಿಗಳಿಗೆ ಅಥವಾ ವಿದ್ಯಾರ್ಥಿಗಳ ಪಾಲಕ, ಪೋಷಕರಿಗೆ ಯಾವುದೇ ಒತ್ತಡ ಆಗದ ರೀತಿಯಲ್ಲಿ ರಜಾ ಅವಧಿಯ ವಿಶೇಷ ತರಗತಿಗೆ ಯೋಜನೆ ಮಾಡಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.












