‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ನಲ್ಲಿ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡ ಹಕ್ಲಾಡಿಯ ಬಾಲ ಪ್ರತಿಭೆ ಸಮೀಕ್ಷಾ
ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಟ್ರೇಲರ್ ಮೂಡಿಬಂದಿದೆ. ರಿಷಬ್ ಶೆಟ್ಟಿ ನಟನೆಯ ಈ ಸಿನಿಮಾವನ್ನು ‘ಹೊಂಬಾಳೆ ಫಿಲ್ಮ್ಸ್’ ಬಹಳ ಅದ್ದೂರಿಯಾಗಿ ವಿಶ್ವಾದ್ಯಂತ ಬಿಡುಗಡೆ ಮಾಡುತ್ತಿದೆ. ಟ್ರೇಲರ್ ನೋಡಿದ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಕ್ಟೋಬರ್ 2ರಂದು ಈ ಸಿನಿಮಾ ತೆರೆಕಾಣಲಿದೆ.
ರಿಷಬ್ ಶೆಟ್ಟಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿರುವ ಈ ಚಿತ್ರ ಅಕ್ಟೋಬರ್ 1ರಂದು ಪ್ರೀಮಿಯರ್ ಶೋ ಇರಲಿದೆ. ಸದ್ಯಕ್ಕೆ ಎಲ್ಲ ಕಡೆಗಳಲ್ಲಿ ‘ಕಾಂತಾರ: ಚಾಪ್ಟರ್ 1’ ಟ್ರೇಲರ್ ಧೂಳೆಬ್ಬಿಸುತ್ತಿದೆ. ಯೂಟ್ಯೂಬ್ ಹಾಗೂ ಇತರೆ ಸೋಶಿಯಲ್ ಮೀಡಿಯಾ ಸೇರಿ 24 ಗಂಟೆಗಳಲ್ಲಿ ಬರೋಬ್ಬರಿ 107 ಮಿಲಿಯನ್ ಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡು ಮುನ್ನುಗ್ಗುತ್ತಿದೆ.


ಕುಂದಾಪುರ ತಾಲೂಕಿನ ಸುರೇಶ್ ಹಕ್ಲಾಡಿ ಹಾಗೂ ಗೀತಾ ಅವರ ಮುದ್ದಿನ ಮಗಳಾದ ಸಮೀಕ್ಷಾ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುತ್ತಾಳೆ.5ನೇ ತರಗತಿ ವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಕ್ಲಾಡಿಯಲ್ಲಿ 7ನೇ ತರಗತಿಯನ್ನು, ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯಲ್ಲಿ ಕಲಿಯುತ್ತಿದ್ದಾಳೆ.12ರ ವಯಸ್ಸಿನ ಈ ಬಾಲ ಪ್ರತಿಭೆ ಎಳೆ ಪ್ರಾಯದಲ್ಲಿ ಶಿಕ್ಷಣದ ಜೊತೆಗೆ ಇವಳು ತಾಂಡವಂ ಡಾನ್ಸ್ ಸ್ಟುಡಿಯೋದಲ್ಲಿ ಸೀನಿಯರ್ ವಿಭಾಗದಲ್ಲಿ ಡಾನ್ಸ್ ಕಲಿಯುತ್ತಿದ್ದಾಳೆ ಹಾಗೂ ಭರತನಾಟ್ಯವನ್ನು ಸೀನಿಯರ್ ವಿಭಾಗದಲ್ಲಿ ಶ್ರೀಮತಿ ವಿದುಷೀ ಭಾಗೀರಥಿ. ಎಮ್. ರಾವ್ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಶ್ರೀಮತಿ ಭಾಗ್ಯೇಶ್ವರಿ ಇವರಲ್ಲಿ ಕಲಿಯುತ್ತಿದ್ದಾಳೆ ಮತ್ತು ಯಕ್ಷಗಾನ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತೊಡಗಿರುತ್ತಾಳೆ. ಸಿನಿಮಾದ ಟ್ರೇಲರ್ ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡ ಹಕ್ಲಾಡಿಯ ಬಾಲ ಪ್ರತಿಭೆ ಸಮೀಕ್ಷಾಳ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.













