ಇರುಳು ಹಗಲಿನ ರಾಜ್ಯೋತ್ಸವ ಸಂಭ್ರಮ “ಕನ್ನಡ ಹಬ್ಬ”

kundapuradotcom@gmail.com
1 Min Read

ಆತ್ಮೀಯರೇ,

ಕುಂದಾಪುರವನ್ನು ಕೇಂದ್ರವಾಗಿಸಿಕೊಂಡು ಕಲೆ, ಕ್ರೀಡೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿಯಮಿತವಾಗಿ ಆಯೋಜಿಸುವ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಸಂಸ್ಥೆ ಈ ಸಲದ ಕರ್ನಾಟಕ ರಾಜ್ಯೋತ್ಸವವನ್ನು ಸತತ 24 ಗಂಟೆಗಳ ಸರಣಿ ಕಾರ್ಯಕ್ರಮ ಆಯೋಜನೆಯ ಮೂಲಕ ತೀರಾ ಭಿನ್ನವಾಗಿ ಆಚರಿಸಲು ಉತ್ಸುಕವಾಗಿದೆ.

ಕನ್ನಡ ನಾಡು, ನುಡಿಯ ಬಗೆಗೆ ಒಲವಿರುವ ತಾವೆಲ್ಲಾ ನಮ್ಮ ರಾಜ್ಯೋತ್ಸವವನ್ನು ಹಬ್ಬದೋಪಾದಿಯಲ್ಲಿ ಸಂಭ್ರಮಿಸಲು ಮತ್ತು ಸದರಿ ಕಾರ್ಯಕ್ರಮದ ಸಿದ್ದತೆ ಕುರಿತಾಗಿ ಪೂರ್ವಭಾವಿಯಾಗಿ ಚರ್ಚಿಸಲು, ಅಕ್ಟೋಬರ್ 28 ರಂದು ಮಂಗಳವಾರ ಸಂಜೆ 6.00 ಗಂಟೆಗೆ ಕಲಾಕ್ಷೇತ್ರ ಕಛೇರಿಯಲ್ಲಿ ಸಭೆ ಕರೆಯಲಾಗಿದೆ.

ದಯವಿಟ್ಟು ಎಲ್ಲರೂ ಬನ್ನಿ ಕಾರ್ಯಕ್ರಮದ ಯಶಸ್ಸಿಗೆ ತಮ್ಮೆಲ್ಲರ ಪಾಲುದಾರಿಕೆ ಇರಲಿ.

ಪ್ರೀತಿಯಿಂದ
ಕಿಶೋರ್ ಕುಮಾರ್ ಕುಂದಾಪುರ
ಅಧ್ಯಕ್ಷ
ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ

Share This Article
Leave a Comment
error: Content is protected !!