ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ
“ನೀರಿನ ಪ್ರತಿಯೊಂದು ಹನಿಯೂ ಅಮೂಲ್ಯ – ಅದನ್ನು ವ್ಯರ್ಥ ಮಾಡಬೇಡಿ”
ಎಂಬ ಮಹತ್ವದ ಸಂದೇಶವಿರುವ ಜಾಗೃತಿ ಪೋಸ್ಟರ್ ಅನ್ನು ಇಂದು ಕುಂದಾಪುರ ದ ಶಾಸಕರಾದ ಸನ್ಮಾನ್ಯ ಶ್ರೀ ಎ.ಕಿರಣ್ ಕುಮಾರ್ ಕೊಡ್ಗಿ ಯವರು ಬಿಡುಗಡೆಗೊಳಿಸಿ ಇಂತಹ ಕಾರ್ಯಗಳು ಪರಿಸರ ಕ್ಕೆ ಉಪಯುಕ್ತ ವಾಗಿದೆ, ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ನಿಂದ ಇನ್ನಷ್ಟು ಉತ್ತಮ ಕಾರ್ಯವಾಗಲಿ ಎಂದು ಶುಭಹಾರೈಸಿದರು.
ಸೇವಾ ಕಾರ್ಯಕ್ರಮದ ಅಂಗವಾಗಿ, ಸಮಾಜದಲ್ಲಿ ನೀರು ಸಂರಕ್ಷಣೆ ಮತ್ತು ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಈ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಿದೆ ನೀರು ಉಪಯೋಗಿಸುವ ಸ್ಥಳ ಗಳಲ್ಲಿ ಇದನ್ನು ಅಳವಡಿಸಿ ಸಾರ್ವಜನಿಕರಿಗೆ, ಜಾಗ್ರತಿ ಮೂಡಿಸಲಗುವುದು ಎಂದು ಅಧ್ಯಕ್ಷರಾದ ಡಾ. ನಾಗರಾಜ್ ಕೌಲಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಲಯನ್ ಡಾ. ನಾಗರಾಜ ಕೌಲಗಿ, ಪ್ರಧಾನ ಕಾರ್ಯದರ್ಶಿ,
ಲಯನ್ ಸುನಿಲ್ ಕುಮಾರ್ ಖಾರ್ವಿ, ಲಯನ್ ನಾಗರಾಜ ಆಚಾರ್ಯ, ಲಯನ್ ಪ್ರವೀಣ್ ಕುಮಾರ್ ಶೆಟ್ಟಿ, ಲಯನ್ ಜನನಿ ದಿನಕರ ಶೆಟ್ಟಿ, ಲಯನ್ ಶಶಿಕಾಂತ್ ಖಾರ್ವಿ, ಲಯನ್ ಮೊಹಮದ್ ಅಶ್ರಫ್ ಉಪಸ್ಥಿತರಿದ್ದರು.

























