“ಕಾರ್ಟೂನು ಹಬ್ಬ – 2025” 12ನೇ ವರ್ಷದ ಅಂಗವಾಗಿ ನಡೆದ ವಿದ್ಯಾರ್ಥಿಗಳ ವ್ಯಂಗ್ಯಚಿತ್ರ ರಚನಾ ಸ್ಪರ್ಧೆಯ ವಿಜೇತರ ಘೋಷಣೆ.

kundapuradotcom@gmail.com
2 Min Read

ಕುಂದಾಪುರದಲ್ಲಿ ನಡೆಯುತ್ತಿರುವ “ಕಾರ್ಟೂನು ಹಬ್ಬ – 2025” ರ 12ನೇ ವರ್ಷದ ಆಚರಣೆಯ ಭಾಗವಾಗಿ, ವಿವಿಧ ವಯೋಮಟ್ಟದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವ್ಯಂಗ್ಯಚಿತ್ರ ರಚನಾ ಸ್ಪರ್ಧೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಈ ಬಾರಿ ಮೂರು ವಿಭಿನ್ನ ವಿಭಾಗಗಳಲ್ಲಿ ನಡೆದ ಸ್ಪರ್ಧೆಗೆ ಜಿಲ್ಲೆಯ ವಿವಿಧ ಶಾಲೆ ಮತ್ತು ಕಾಲೇಜುಗಳಿಂದ ಅಪಾರ ಸ್ಪಂದನೆ ಲಭಿಸಿತು.

4ರಿಂದ 7ನೇ ತರಗತಿ ವಿಭಾಗ

ವಿಷಯ: “ನಮ್ಮ ಪೊಲೀಸರು ನಮ್ಮ ಹೆಮ್ಮೆ – My Police, My Pride”

ಪ್ರಥಮ ಬಹುಮಾನ: ಅಕ್ಷರಾ (ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸ್ಕುತ್ತೂರು)

ದ್ವಿತೀಯ ಬಹುಮಾನ: ಅನ್ವಿತ್ ಆರ್. ಶೆಟ್ಟಿಗಾರ್ (ಸೈಂಟ್ ಮೇರಿಸ್ ಇಂಗ್ಲಿಷ್ ಮೀಡಿಯಂ ಶಾಲೆ, ಉಡುಪಿ)

ತೃತೀಯ ಬಹುಮಾನ: ತನುಷ್ ಪಿ. ಪೂಜಾರಿ (ಎಸ್‌.ವಿ. ಇಂಗ್ಲಿಷ್ ಮೀಡಿಯಂ ಶಾಲೆ, ಗಂಗೊಳ್ಳಿ)

ಸಮಾಧಾನಕರ ಬಹುಮಾನಗಳು: ಹರ್ಷಿತಾ ಪ್ರಭು (ವಿದ್ಯೋದಯ ಪಬ್ಲಿಕ್ ಸ್ಕೂಲ್), ನಿಹಾರ್ ಜೆ.ಎಸ್ (ಜಿ.ಎಂ ವಿದ್ಯಾನಿಕೇತನ್, ಬ್ರಹ್ಮಾವರ), ನಿದೀಶ್ ಜೆ. ನಾಯ್ಕ್ (ಜಿ.ಎಂ ವಿದ್ಯಾನಿಕೇತನ್), ಆತ್ಮೀಕಾ (ಎಚ್‌.ಎಂ‌.ಎಂ. ಇಂಗ್ಲಿಷ್ ಮೀಡಿಯಂ ಸ್ಕೂಲ್, ಕುಂದಾಪುರ), ಸಾನ್ವಿ ಸಾಲ್ಯಾನ್ (ವಿದ್ಯೋದಯ ಪಬ್ಲಿಕ್ ಸ್ಕೂಲ್)

8ರಿಂದ 10ನೇ ತರಗತಿ ವಿಭಾಗ

ವಿಷಯ: “ಮಾದಕ ವ್ಯಸನದಿಂದ ಮಕ್ಕಳನ್ನು ರಕ್ಷಿಸಿ – Save children from drug menace”

ಪ್ರಥಮ ಬಹುಮಾನ: ಕ್ಷಿತಿಜ್ (ಜಿ.ಎಂ ವಿದ್ಯಾನಿಕೇತನ್)

ದ್ವಿತೀಯ ಬಹುಮಾನ: ನಿರ್ಭಯ್ ಯು. ಶೆಟ್ಟಿ (ಗುರುಕುಲ ಪಬ್ಲಿಕ್ ಸ್ಕೂಲ್)

ತೃತೀಯ ಬಹುಮಾನ: ವಿಶ್ರುತಾ ಸಾಮಗ (ವಿದ್ಯೋದಯ ಪಬ್ಲಿಕ್ ಸ್ಕೂಲ್)

ಸಮಾಧಾನಕರ ಬಹುಮಾನಗಳು: ಸಂಪ್ರೀತ್ (ಮದರ್ ತೆರೇಸಾ ಸ್ಕೂಲ್), ವಿನೀಶ್ ಆಚಾರ್ಯ (ಎಸ್‌.ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ), ಶ್ರೀಲತಾ ಎಸ್‌ ನಾಯಕ್ (ಶ್ರೀ ವೆಂಕಟರಮಣ ಇಂಗ್ಲಿಷ್ ಮೀಡಿಯಂ ಶಾಲೆ), ಸಾನ್ವಿ ಪವನ್ (ಲಿಟಲ್ ರಾಕ್ ಇಂಗ್ಲಿಷ್ ಮೀಡಿಯಂ ಶಾಲೆ), ಲತಿಕಾ ಪೂಜಾರಿ (ಸಂದೀಪನ್ ಇಂಗ್ಲಿಷ್ ಮೀಡಿಯಂ ಶಾಲೆ, ಕಂಬದಕೋಣೆ)

ಪಿಯುಸಿ ಮತ್ತು ಮೇಲ್ಪಟ್ಟ ವಿಭಾಗ

ವಿಷಯ: “ಸೈಬರ್ ಪ್ರಪಂಚದ ಅಪಾಯಗಳು – Dangers of Cyber World”

ಪ್ರಥಮ ಬಹುಮಾನ: ನೂರ್ ಮಾಝಿನ್ (ವೆಂಕಟರಮಣ ಇಂಗ್ಲಿಷ್ ಮೀಡಿಯಂ ಶಾಲೆ, ಕುಂದಾಪುರ)

ದ್ವಿತೀಯ ಬಹುಮಾನ: ಶರಧಿ (ವಿವೇಕ ಪಿ.ಯು ಕಾಲೇಜು, ಕೋಟ)

ತೃತೀಯ ಬಹುಮಾನ: ಪ್ರತಿಷ್ಠಾ ಶೇಟ್ (ವಿದ್ಯೋದಯ ಪಿ.ಯು ಕಾಲೇಜು, ಕೋಟ)

ಸಮಾಧಾನಕರ ಬಹುಮಾನಗಳು: ಹಿರಣ್ಮಯಿ (ಜನತಾ ಪಿ.ಯು. ಕಾಲೇಜು), ಆದಿತ್ಯ ಎನ್. ದೇವಾಡಿಗ (ಎಸ್‌.ಎಂ‌.ಎಸ್ ಕಾಲೇಜು, ಬ್ರಹ್ಮಾವರ), ಅದ್ವೈತ್ (ಎಸ್‌.ಎಮ್‌.ವಿ‌.ಐ‌.ಟಿ‌.ಎಂ, ಭಟ್ಕಳ), ಪ್ರೀತಮ್ ಮೇಸ್ತಾ (ಎಕ್ಸಲೆಂಟ್ ಪಿ.ಯು ಕಾಲೇಜು), ದೀಕ್ಷಾ (ವಿವೇಕ ಪಿ.ಯು ಕಾಲೇಜು, ಕೋಟ)

ಮಹಿಳಾ ವ್ಯಂಗ್ಯಚಿತ್ರ ರಿಗೆ ವಿಶೇಷ ಪ್ರೋತ್ಸಾಹ: ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಸ್ತ್ರೀಯರ ಪಾಲ್ಗೊಳ್ಳುವಿಕೆ ಅತೀ ಕಡಿಮೆ ಇರುವುದರಿಂದ, ಮೂರು ವಿಭಾಗಗಳಲ್ಲಿಯೂ ಪ್ರತಿಭೆ ತೋರಿದ ಒಬ್ಬೊಬ್ಬ ವಿದ್ಯಾರ್ಥಿನಿಗೆ ಹೆಚ್ಚುವರಿ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗಿದೆ. ಅವುಗಳ ವಿವರ: ಪ್ರಿಯಾ ಎಸ್‌.ಎಸ್., ಪೂರ್ವಿ‌., ಪಂಚಮಿ.

“ಕಾರ್ಟೂನು ಹಬ್ಬ–2025” ಸಂಘಟನಾ ಸಮಿತಿ ವಿಜೇತರಿಗೆ ಹಾರ್ದಿಕ ಅಭಿನಂದನೆಗಳನ್ನು ತಿಳಿಸಿದೆ. ಎಲ್ಲ ವಿಭಾಗಗಳಲ್ಲಿಯೂ ವಿದ್ಯಾರ್ಥಿಗಳಿಂದ ಬಂದ ಶಕ್ತಿ ತುಂಬಿದ ಚಿತ್ರಣಗಳು ಸಾಮಾಜಿಕ ಜಾಗೃತಿ, ಸೃಜನಶೀಲತೆ ಮತ್ತು ಸಮಕಾಲೀನ ವಿಷಯಗಳ ಅರಿವನ್ನು ಬಿಂಬಿಸಿದೆ. ಸ್ಪರ್ಧೆಗೆ ಬೆಂಬಲ ನೀಡಿದ ಶಿಕ್ಷಕರು, ಪಾಲಕರು ಮತ್ತು ಕಲಾಪ್ರೇಮಿಗಳಿಗೆ ತಂಡ ಧನ್ಯವಾದಗಳನ್ನು ಸಲ್ಲಿಸಿದೆ.

ಕಾರ್ಟೂನು ಹಬ್ಬ – 2025 ತಂಡ

Share This Article
Leave a Comment
error: Content is protected !!