79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕುಂದಾಪುರದ ಖಾರ್ವಿಕೇರಿ ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ನ ವಠಾರದಲ್ಲಿ ಜರುಗಿತು. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಂಘದ ಮಾಜಿ ಅಧ್ಯಕ್ಷರು ಹಿರಿಯರಾದ ಶ್ರೀಯುತ ಕೆ.ಬಿ.ಖಾರ್ವಿ ಮತ್ತು ಸಂಸ್ಥೆಯ ಸದಸ್ಯರಾದ ಹರ್ಷ ಪಟೇಲ್ ನೆರವೇರಿಸಿದರು.
ನಮ್ಮ ಕ್ಲಿನಿಕ್ ಖಾರ್ವಿಕೇರಿ ಕುಂದಾಪುರ ಇದರ ವೈದ್ಯರಾದ ಶ್ರೀಯುತ ಡಾ.ವಿಘ್ನೇಶ್, ಪುರಸಭಾ ಸದಸ್ಯರಾದ ಶ್ರೀ ಚಂದ್ರಶೇಖರ ಖಾರ್ವಿ,ವಿದ್ಯಾರಂಗ ಮಿತ್ರ ಮಂಡಳಿ ( ರಿ)ಇದರ ಮಾಜಿ ಅಧ್ಯಕ್ಷರಾದ ಶ್ರೀ ದಿನಕರ ಪಟೇಲ್, ಕಿಂಗ್ ಫಿಶರ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರೇಷ್ಮಾ ಸಂದೀಪ್ ಖಾರ್ವಿ,ಗಂಗೊಳ್ಳಿ ಮೀನುಗಾರ ಸಹಕಾರಿ ಸಂಘದ ಸದಸ್ಯೆ ಶ್ರೀಮತಿ ಉಷಾ ಗುರುಪ್ರಸಾದ್ ಖಾರ್ವಿ, ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ಕಬಡ್ಡಿ ತಂಡ ಮಾಜಿ ನಾಯಕ ಶ್ರೀ ರವಿದಾಸ ಖಾರ್ವಿ, ಕಿಂಗ್ ಫಿಶರ್ ಸ್ಪೋರ್ಟ್ಸ್ ಕ್ಲಬ್ ನ ಗೌರವ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಖಾರ್ವಿ, ಉಪಸ್ಥಿತರಿದ್ದರು.



