ಕುಂದಾಪುರ: ಸಾಸ್ತಾನದ ಕೋಡಿತಲೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ಖ್ಯಾತ ಮನೋರೋಗ ವೈದ್ಯರಾದ ಸೀತಾರಾಮ ಕಾರಂತರವರು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಹಂಗಾರಕಟ್ಟೆಯ ರೋಟರಿ ಕ್ಲಬ್ ನ ಕಾರ್ಯದರ್ಶಿ ಮುರುಳಿದರ್,ಸದಸ್ಯರಾದ ಸುನೀಲ್.ಪಂಚಶಕ್ತಿ ಸಂಘದ ಗೌರವಾಧ್ಯಕ್ಷರಾದ ಮಡಿ ವಿಶ್ವನಾಥ ಖಾರ್ವಿ,ಯಕ್ಷೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರಾದ ಬಸವ ಖಾರ್ವಿ ಭಾಂದವ್ಯ ಆಟೋ ಚಾಲಕ ಸಂಘದ ಪದಾಧಿಕಾರಿ ಅನಿಲ ಖಾರ್ವಿ, ಊರಿನ ಹಿರಿಯರಾದ ಭೋಜ ಖಾರ್ವಿ, ಕೃಷ್ಣ ಖಾರ್ವಿ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ರಾಮ ಖಾರ್ವಿ ಹಾಗೂ ಸದಸ್ಯರು,,ಮುಖ್ಯ ಶಿಕ್ಷಕಿ ನಾಗರತ್ನ ಹಾಗೂ ಸಹ ಶಿಕ್ಷಕಿಯರು, ಕಿಂಗ್ ಸೆವೆನ್ ಸಂಘದ ಅಧ್ಯಕ್ಷರಾದ ಆನಂದ ಖಾರ್ವಿ, ವೀರ ಕೇಸರಿ ಸಂಘದ ಪದಾಧಿಕಾರಿಗಳು ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ಶಿಕ್ಷಕಿ ಸುಪ್ರೀತ ಕಾರ್ಯಕ್ರಮ ನಿರ್ವಹಿಸಿದರು.

