ಕುಂದಾಪುರ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ನಮ್‌ ಕುಂದಾಪ್ರ ಚಿತ್ರಕಲಾ ಪ್ರದರ್ಶನ

kundapuradotcom@gmail.com
2 Min Read

ಕುಂದಾಪುರ ತ್ರಿವರ್ಣ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ಕುಂದಾಪುರ ಸಂಸ್ಕೃತಿ ಮತ್ತು ಆಚರಣೆಗಳನ್ನು ಬಿಂಬಿಸುವ ನಮ್ ಕುಂದಾಪುರ ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯನ್ನು ತಾರೀಕು 16.8.2025 ರಂದು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣಕುಮಾರ್ ರವರು ಉಧ್ಘಾಟಿಸಿದರು.

ಸಮಾರಂಭದಲ್ಲಿ ಅತಿಥಿ ಅಭ್ಯಾಗತರಾಗಿ ಕುಂದಾಪುರ ಓಕ್ ವುಡ್ ಇಂಡಿಯನ್ ಸ್ಕೂಲ್ ಮ್ಯಾನೆಜ್ ಮೆಂಟ್ ಜಂಟಿ ಕಾರ್ಯದರ್ಶಿ ಶ್ರೀಮತಿ ನೀತಾ ಶೆಟ್ಟಿ,ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಕಲಾಕ್ಷೇತ ಕುಂದಾಪುರ ಟ್ರಸ್ಟಿ ಶ್ರೀ ಕಿಶೋರ್ ಕುಮಾರ್ ರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ತನುಶ್ರೀ ಸ್ವಾಗತಿಸಿದರು.ತ್ರಿವರ್ಣ ಆರ್ಟ್ ಗ್ಯಾಲರಿಯ ಮುಖ್ಯಸ್ಥರಾದ ಶ್ರೀ ಹರೀಶ್ ಸಾಗರವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಉಧ್ಘಾಟಕರಾದ ಶ್ರೀ ಶರಣಕುಮಾರ್ ರವರು ಈ ಸಂದರ್ಭದಲ್ಲಿ ಮಾತನಾಡಿ,ವಿದ್ಯಾರ್ಥಿಗಳ ಚಿತ್ರಕಲಾ ಪ್ರೌಢಿಮೆಯನ್ನು ಉತ್ತೇಜಿಸಲು ತ್ರಿವರ್ಣ ಆರ್ಟ್ ಗ್ಯಾಲರಿ ಆಯೋಜಿಸಿರುವ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. ತಾರೀಕು 16.8.2025 ರಿಂದ 18.8.2025 ರವರೆಗೆ ಕುಂದಾಪುರ ಹಳೆಬಸ್ ಸ್ಟಾಂಡ್ ನ ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿರುವ ಈ ಕಲಾಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು,ಬೆಳಿಗ್ಗೆ 10.30 ರಿಂದ ಸಂಜೆ 7 ಗಂಟೆಯವರೆಗೆ ಸಮಯಾವಕಾಶವಿದೆ.

“ನಮ್‌ ಕುಂದಾಪ್ರ” ಚಿತ್ರಕಲಾ ಪ್ರದರ್ಶನ ಕುಂದಾಪುರ ಪರಿಸರದ ಅವಿಸ್ಮರಣೀಯ ಸ್ಥಳ ಮತ್ತು ಸಂಸ್ಕೃತಿಯ ಪ್ರತೀಕವನ್ನು ಬಿಂಬಿಸುವ “ನಮ್‌ ಕುಂದಾಪ್ರ” ಚಿತ್ರಕಲಾ ಪ್ರದರ್ಶನವು ವಿಶೇಷವಾಗಿದ್ದು ನಮ್ಮ ಮಣ್ಣಿನಗುಣವನ್ನು ಅರ್ಥೈಸುವುದರೊಂದಿಗೆ, ಕಲಾಭ್ಯಾಸಗೈಯುವ ವಿದ್ಯಾರ್ಥಿಯರಿಗೆ ಕಲಾ ವೇದಿಕೆಯನ್ನು ಕಲ್ಪಿಸುವನಿಟ್ಟಿನಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ರಚಿಸಿರುವ ಕಲಾಕೃತಿಗಳು:- ಪಂಚ ಗಂಗಾವಳಿ, ಸಿಧ್ದಿವಿನಾಯಕ, ಥೀಂ ಪಾರ್ಕ್, ಕೋಟಿಲಿಂಗೇಶ್ವರ, ಮೀನುಗಾರರು, ಕೋಡಿ ಬೀಚ್, ಬೇಸಾಯ, ನಾಗ ಬನ, ಪ್ರಾರ್ಥನೆ, ಕಾಂತಾರ, ಕೆಲಸಗಾರರು, ನಾಟ್ಯ, ಕುಂದೇಶ್ವರ, ಪಶುಪಾಲನೆ, ಹುಲಿವೇಷ, ಬ್ರಹ್ಮಲಿಂಗೇಶ್ವರ, ಕಟ್ಟೆ ಪೂಜೆ, ಸಂತೆ, ಗೂಡಂಗಡಿ, ವಿನಾಯಕ, ಕಂಬಳ, ಸುರ ಪಾನ, ಕೊಲ್ಲೂರು ಟೆಂಪಲ್, ಕೆರಾಡಿಟೆಂಪಲ್, ಗೊಂಬೆಯಾಟ, ನಂದಾ ದೀಪ, ಭಜನೆ, ಗಂಗಾರತಿ, ಟೆಂಪಲ್, ಗರಡಿ ಎಂಬ ಕಲಾಕೃತಿಗಳು 18×18 ಇಂಚಿನಅಕ್ರಾಲಿಕ್‌ಕ್ಯಾನ್ವಾಸ್, ಜಲವರ್ಣ, ಚಾರ್ಕೋಲ್, ಮಿಶ್ರ ಮಾಧ್ಯಮದ ಶೇಡಿಂಗ್ಸ್ನಒಟ್ಟು 30 ಕಲಾಕೃತಿಗಳು ಅನಾವರಣಗೊಳ್ಳಲಿದೆ.

ಈ ಕಲಾಪ್ರದರ್ಶನದಲ್ಲಿ 18 ವರ್ಷದೊಳಗಿನ 30 ವಿದ್ಯಾರ್ಥಿಗಳ ಚಿತ್ರಕಲೆ ಪ್ರದರ್ಶಿತಗೊಂಡಿದೆ. ಕುಂದಾಪುರದ ಮಣ್ಣಿನ ಸಂಸ್ಕೃತಿ ಬಿಂಬಿಸುವ ವೈವಿಧ್ಯಮಯ ಚಿತ್ರಕಲೆಗಳು ಪ್ರದರ್ಶಿತಗೊಳ್ಳುತ್ತಿದ್ದು, ಆಕ್ರಾಲಿಕ್, ಕ್ಯಾನ್ವಾಸ್, ಚಾರ್ಕೋಲ್, ಜಲವರ್ಣ, ಮಿಶ್ರ ಶೇಡಿಂಗ್ ಸೇರಿದಂತೆ ವಿವಿಧ ಶೈಲಿಯ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿದೆ.

ವರದಿ : ಸುಧಾಕರ್ ಕುಂದಾಪುರ
www.kundapura.com

Share This Article
Leave a Comment