ಹೊಳ್ಳರ ಪ್ರೀತಿಯ ಬೆಣ್ಣೆ ಮಸಾಲೆ ದೋಸೆ

kundapuradotcom@gmail.com
2 Min Read

ಬೆಣ್ಣೆ ದೋಸೆ ಎಂದ ಕೂಡಲೇ ನೆನಪಾಗುವುದು ದಾವಣಗೆರೆಯ ಬೆಣ್ಣೆದೋಸೆ ಆದರೆ ಕುಂದಾಪುರ ಹಾಲಾಡಿಯ ಸ್ವಾದಿಷ್ಟಕರ ಬೆಣ್ಣೆ ಮಸಾಲೆ ದೋಸೆ ಬಗ್ಗೆ ಕೇಳಿದ್ದೀರಾ? ಬನ್ನಿ ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ಹಾಲಾಡಿಯ ಮುಖ್ಯ ರಸ್ತೆಯಲ್ಲಿರುವ ಗುರು ಕ್ಯಾಂಟೀನ್ ಈ ಭಾಗದಲ್ಲಿ ಬೆಣ್ಣೆ ಮಸಾಲೆ ದೋಸೆಗೆ ಪ್ರಸಿದ್ಧಿ ಪಡೆದಿದೆ. ಸುಬ್ರಹ್ಮಣ್ಯ ಹೊಳ್ಳ ಎಂಬುವರು ಈ ಕ್ಯಾಂಟೀನ್ ಮಾಲೀಕರಾಗಿದ್ದು, ಅವರ ಕೈಗುಣದಲ್ಲಿ ಸ್ವಾದಿಷ್ಟವಾದ ರುಚಿ ಪಡೆಯುವ ಬೆಣ್ಣೆ ಮಸಾಲೆ ದೋಸೆ ಸವಿಯಲು ದೂರ ದೂರದ ಊರಿನಿಂದ ಜನ ಬರುತ್ತಾರೆ.

ಮೂಲತಃ ಸಾಲಿಗ್ರಾಮದ ಪಾಂಡೇಶ್ವರದವರಾಗಿರುವ ಸುಬ್ರಹ್ಮಣ್ಯ ಹೊಳ್ಳರು 24 ವರ್ಷಗಳ ಹಿಂದೆ ಹಾಲಾಡಿಗೆ ಬಂದು ತಮ್ಮ ಬೆಣ್ಣೆ ಮಸಾಲೆ ದೋಸೆ ಕ್ಯಾಂಟೀನ್ ಪ್ರಾರಂಭಿಸಿದರು. ಮೊದಲಿನಿಂದಲೂ ಸುಬ್ರಹ್ಮಣ್ಯ ಹೊಳ್ಳರು ಬೆಣ್ಣೆ ಮಸಾಲೆ ದೋಸೆ ಮಾಡುವುದರಲ್ಲಿ ಪರಿಣಿತರಾಗಿದ್ದು, ಹಾಲಾಡಿ ಊರು ಅವರ ಬೆಣ್ಣೆ ಮಸಾಲೆ ದೋಸೆಗೆ ಪ್ರಸಿದ್ಧಿ ತಂದುಕೊಟ್ಟಿತ್ತು. ಸುಬ್ರಹ್ಮಣ್ಯ ಹೊಳ್ಳರು ಮಾಡುವ ಬೆಣ್ಣೆ ಮಸಾಲೆ ದೋಸೆ ಕೇವಲ ಪದಾರ್ಥಗಳಿಂದ ತುಂಬಿರುವುದಿಲ್ಲ, ಬದಲಾಗಿ ಪ್ರೀತಿಯಿಂದ ತುಂಬಿರುತ್ತದೆ ಹಾಗಾಗಿ ಅವರು ಮಾಡುವ ಬೆಣ್ಣೆ ಮಸಾಲೆ ದೋಸೆ ಸಾದಿಷ್ಟಕರ ಸವಿರುಚಿಯನ್ನು ಪಡೆಯುತ್ತದೆ.

ಹಾಲಾಡಿಯ ಗುರು ಕ್ಯಾಂಟೀನ್ ನನ್ನು ಸುಬ್ರಹ್ಮಣ್ಯ ಹೊಳ್ಳರವರು 24 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮುಂಚೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಈ ಹೋಟೆಲ್ನಲ್ಲಿ ಊಟ ಉಪಹಾರಗಳು ಲಭ್ಯವಿರುತ್ತಿತ್ತು. ಕಾರಣಾಂತರದಿಂದ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಮಾತ್ರ ಈ ಹೋಟೆಲ್ ತೆರದಿರುತ್ತದೆ. ಈ ಹೋಟೆಲ್ ಅಲ್ಲಿ 6 ಬಗೆಯ ದೋಸೆ ಸಿಗುತ್ತದೆ. ಖಾಲಿ, ಪ್ಲೈನ್, ಸೆಟ್, ಬೆಣ್ಣೆ ಖಾಲಿ, ಬೆಣ್ಣೆ ಪ್ಲೈನ್, ಬೆಣ್ಣೆ ಮಸಾಲೆ ದೋಸೆಗಳು ಇಲ್ಲಿ ಸಿಗುತ್ತದೆ. ಆದರೆ ಬೆಣ್ಣೆ ಮಸಾಲೆ ದೋಸೆ ಎಲ್ಲರಿಗೂ ತುಂಬಾ ಹಿಡಿಸಿರುತ್ತದೆ.

ಆರೋಗ್ಯಕರ ಆಹಾರ ಬಳಕೆಯ ಮೂಲಭೂತ ತತ್ವಗಳನ್ನು ಮನದಲ್ಲಿಟ್ಟುಕೊಂಡು ಗ್ರಾಹಕರಿಗೆ ಒಳ್ಳೆಯ ಗುಣಮಟ್ಟದ ಬೆಣ್ಣೆ ಮಸಾಲೆ ದೋಸೆ ನೀಡುತ್ತಿರುವ ಸುಬ್ರಹ್ಮಣ್ಯ ಹೊಳ್ಳರ ಹೋಟೆಲ್ ಗಳಿಗೆ ರಾಜ್ಯ ಮತ್ತು ಹೊರರಾಜ್ಯಗಳಿಂದಲೂ ಜನರು ಬಂದು ಬೆಣ್ಣೆ ಮಸಾಲೆ ದೋಸೆಯ ರುಚಿ ಸವಿಯುತ್ತಿದ್ದಾರೆ. ಹೊಳ್ಳರ ಹೋಟೆಲಿನಲ್ಲಿ ಮದ್ಯಾಹ್ನ ಮೂರು ಗಂಟೆಯಿಂದ ಸಂಜೆ ಏಳು ಗಂಟೆಯ ತನಕ ಮಾತ್ರ ಬೆಣ್ಣೆ ಮಸಾಲೆ ದೋಸೆ ಸಿಗುತ್ತದೆ ಹಾಗಾಗಿ ಗ್ರಾಹಕರು ಈ ಹೋಟೆಲ್ ನಲ್ಲಿ ಬೆಣ್ಣೆ ಮಸಾಲೆ ದೋಸೆಗಾಗಿ ಕ್ಯೂ ನಿಲ್ಲುತ್ತಾರೆ. ಗುಣಮಟ್ಟದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳದ ಸುಬ್ರಹ್ಮಣ್ಯ ಹೊಳ್ಳರು ಗ್ರಾಹಕರಿಗೆ ಪೂರೈಸುವ ಬೆಣ್ಣೆ ಮಸಾಲೆ ದೋಸೆಯ ಕೀರ್ತಿ ಎಲ್ಲೆಡೆ ಹಬ್ಬಿದೆ.

ಗುರು ಕ್ಯಾಂಟೀನ್ ನಲ್ಲಿ ಬೆಳಿಗ್ಗೆ ಇತರ ತಿಂಡಿಗಳು ಲಭ್ಯವಿರುತ್ತದೆ ಮದ್ಯಾಹ್ನದ ಮೇಲೆ ಬೆಣ್ಣೆ ಮಸಾಲೆ ದೋಸೆ, ಬೆಣ್ಣೆ ಖಾಲಿ ದೋಸೆಗಳಿಗೆ ಮೀಸಲು ಹಾಲಾಡಿಯ ದುರ್ಗಾ ಕ್ಲಿನಿಕ್ ಎದುರುಗಡೆ ಇರುವ ಈ ಕ್ಯಾಂಟೀನ್ ಹಾಲಾಡಿ ಸೋಮೇಶ್ವರ ರಸ್ತೆಯಲ್ಲಿದೆ ಈ ರಸ್ತೆ ಆಗುಂಬೆ, ಶೃಂಗೇರಿಗೆ ಸಂಪರ್ಕ ಕಲ್ಪಿಸುವುದರಿಂದ ಸದಾಕಾಲವೂ ಬಿಜಿಯಾಗಿರುತ್ತದೆ ಕುಂದಾಪುರ ಕಡೆಯಿಂದ ಶೃಂಗೇರಿಗೆ ಹೋಗುವ ಭಕ್ತರು ಮತ್ತು ಶೃಂಗೇರಿಯಿಂದ ಬರುವ ಭಕ್ತರು ಈ ಕ್ಯಾಂಟೀನ್ ನಲ್ಲಿ ಬೆಣ್ಣೆ ಮಸಾಲೆ ದೋಸೆಯ ರುಚಿಯನ್ನು ಸವಿದು ಹೋಗುತ್ತಾರೆ.

ನಿವೇನಾದರೂ ಹಾಲಾಡಿ ಕಡೆ ಪ್ರಯಾಣ ಬೆಳೆಸಿದಲ್ಲಿ ಗುರು ಕ್ಯಾಂಟೀನ್ ಬೆಣ್ಣೆ ಮಸಾಲೆ ದೋಸೆಯನ್ನು ಒಮ್ಮೆ ಸವಿದು ನೋಡಿ ಖಂಡಿತಾ ನಿಮಗೆ ಉತ್ಕೃಷ್ಟ ರುಚಿಯ ಹೊಸ ಅನುಭವ ಪ್ರಾಪ್ತಿಯಾಗುತ್ತದೆ. ಹೋಟೆಲ್ ವಿಭಾಗದಲ್ಲಿ 44 ವರ್ಷಗಳ ಅಪಾರ ಅನುಭವವಿರುವ ಸುಬ್ರಹ್ಮಣ್ಯ ಹೊಳ್ಳರ ಗುರು ಕ್ಯಾಂಟೀನ್ ಮಸಾಲೆ ಬೆಣ್ಣೆ ದೋಸೆಯ ಸವಿರುಚಿಯ ಬಗ್ಗೆ ಹಲವಾರು ಯೂಟ್ಯೂಬ್ ಚಾನಲ್ ಮತ್ತು ಸುದ್ದಿ ವಾಹಿನಿಗಳಲ್ಲಿ ವಿಸ್ತೃತವಾದ ದೃಶ್ಯಚಿತ್ರಣಗಳು ಮೂಡಿಬಂದಿದೆ.

ವರದಿ: ಸುಧಾಕರ್ ಕುಂದಾಪುರ
ಕುಂದಾಪುರ.ಕಾಂ

Share This Article
Leave a Comment