ನಾಲ್ಕನೇ ದಕ್ಷಿಣ ಭಾರತ ವಲಯ ಕರಾಟೆ ಚಾಂಪಿಯನ್ ಶಿಪ್
ಸಾನಿಧ್ಯ ಎಸ್ ನಾಯ್ಕಗೆ ಚಿನ್ನದ ಪದಕ ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಂ ನಲ್ಲಿ ಅಗಸ್ಟ್ 30 2025ರಂದು ರಂದು ನಡೆದ ನಾಲ್ಕನೇ ದಕ್ಷಿಣ ಭಾರತ ವಲಯ ಕರಾಟೆ ಚಾಂಪಿಯನ್ಶಿಪ್ನಲ್ಲಿ ಕುಂದಾಪುರದ ಖಾರ್ವಿಕೇರಿ ನಿವಾಸಿ ಗುರುಕುಲ ಪಬ್ಲಿಕ್ ಸ್ಕೂಲ್ ಕೋಟೇಶ್ವರದ 8ನೇ ತರಗತಿಯ ವಿದ್ಯಾರ್ಥಿನಿ ಸಾನಿಧ್ಯ ಎಸ್ ನಾಯ್ಕ12ರ ವಯೋಮಾನದ ವಿಭಾಗದಲ್ಲಿ ಕುಮಿಟಿಯಲ್ಲಿ ಚಿನ್ನದ ಪದಕವನ್ನು ಮತ್ತುಕಟಾ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿರುತ್ತಾರೆ.
ಸಾನಿಧ್ಯ ಕಳೆದ 4 ವರ್ಷಗಳಿಂದ ಕರಾಟೆಯನ್ನು ಕುಂದಾಪುರದ ಪ್ರಖ್ಯಾತ ಕಿರಣ್ ಡ್ರ್ಯಾಗನ್ ಫಿಸ್ಟ್ ಮಾರ್ಷಲ್ ಆರ್ಟ್ಸ್ ಆಫ್ ಇಂಡಿಯಾ ರಿಜಿಸ್ಟರ್ಡ್ ಇಲ್ಲಿ ಶ್ರೀ ಕಿರಣ್ ಕುಮಾರ್ ಡಿ ಕುಂದಾಪುರ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಸ್ತುತ ಬ್ರೌನ್ 2 RANK ಬೆಲ್ಟ್ ಅನ್ನು ಪಡೆದು ತನ್ನ ಕಲಿಕೆಯನ್ನು ಮುಂದುವರಿಸಿದ್ದಾರೆ. ಕರಾಟೆಯಲ್ಲಿ ಸಾಕಷ್ಟು ಪ್ರಶಸ್ತಿಗಳನ್ನ ಪಡೆದುಕೊಂಡಿರುವ 2024ರ ಸಾಲಿನ ಡಾ. ಶಿವರಾಮ್ ಕಾರಂತ್ ಬಾಲ ಪ್ರತಿಭಾ ಪುರಸ್ಕೃತರಾದ ಇವರು KARATE INDIA ORGANIZATION ದೆಹಲಿಯಲ್ಲಿ ಆಯೋಜಿಸಿದ KIO ಆಲ್ ಇಂಡಿಯಾ ಸಬ್ ಜೂನಿಯರ್ ಕರಾಟೆ ಚಾಂಪಿಯನ್ಶಿಪ್ 2024ರ 11ರ ಹರೆಯದ – 45ಕೆಜಿ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಬೆಳ್ಳಿ ಪದಕ ತಂದು ಕೊಟ್ಟು ನಮ್ಮ ಜಿಲ್ಲೆಗೆ, ಕರ್ನಾಟಕ ರಾಜ್ಯಕ್ಕೆ ಗೌರವ ತಂದುಕೊಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.






