ಸ್ವಾದಿಷ್ಟಕರ ತಿಂಡಿ ತಿನಿಸುಗಳ ಭೂಸ್ವರ್ಗ ಕುಂದಾಪುರದ ಪಾರಿಜಾತ
ಕುಂದಾಪುರ ಹೃದಯಭಾಗದಲ್ಲಿರುವ ಪಾರಿಜಾತ ಸರ್ಕಲ್ ಗೆ ಘನತೆಯ ಮತ್ತು ಅವಿಸ್ಮರಣೀಯ ಹೆಸರನ್ನು ತಂದುಕೊಟ್ಟ ಕೇಂದ್ರ ಬಿಂದು ಹೋಟೆಲೆಂದರೆ ಅದು ಪಾರಿಜಾತ ಹೋಟೆಲ್ ಈ ಪಾರಿಜಾತ ಹೋಟೆಲ್ ತಿಂಡಿ ತಿನಿಸುಗಳ ಭೂಸ್ವರ್ಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಊರ ಪರವೂರ ಜನರ ಹೃತ್ಪೂರ್ವಕ ಪ್ರಶಂಸೆಗೆ ಭಾಜನವಾಗಿದೆ.
70 ರ ದಶಕದಲ್ಲಿ ಕುಂದಾಪುರದಲ್ಲಿ ಶಾಲಾ ಕಾಲೇಜುಗಳು, ಬ್ಯಾಕಿಂಗ್ ಉದ್ಯಮಗಳು ಪ್ರಾರಂಭಗೊಂಡ ಕಾಲಘಟ್ಟದಲ್ಲಿ ಊರಿಗೊಂದು ಸುವ್ಯವಸ್ಥಿತ ಹೋಟೆಲೊಂದರ ಅಗತ್ಯವಿತ್ತು ಆ ಸಾಂಧರ್ಭಿಕ ಸಮಯದಲ್ಲಿ ಪ್ರಾರಂಭಗೊಂಡಿದ್ದೇ ಹೋಟೆಲ್ ಪಾರಿಜಾತ ದೇವಲೋಕದ ಪುಷ್ಪ ಪಾರಿಜಾತದ ಹೆಸರಿನಲ್ಲಿ ತಾರೀಕು 26.9.1969 ರಂದು ರಾಮಚಂದ್ರ ಭಟ್ ರವರು ಪ್ರಾರಂಭಿಸಿ ಕುಂದಾಪುರದಲ್ಲಿ ಹೋಟೆಲ್ ಉದ್ಯಮಕ್ಕೆ ಹೊಸ ಹುರುಪು ನೀಡಿದರು.


ವೃಂದಾವನ ಬಿಲ್ಡಿಂಗ್ ನಲ್ಲಿ ವಿದ್ಯುಕ್ತವಾಗಿ ಪ್ರಾರಂಭಗೊಂಡ ಹೋಟೆಲ್ ಪಾರಿಜಾತದ ಬೆಳವಣಿಗೆ ಕೆಲವೇ ವರ್ಷಗಳಲ್ಲಿ ವೇಗವನ್ನು ಪಡೆಯಿತು ವೃಂದಾವನ ಬಿಲ್ಡಿಂಗ್ ನಲ್ಲಿ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಗೊಂಡ ಪಾರಿಜಾತ ಹೋಟೆಲ್ ಹಂತ ಹಂತವಾಗಿ ವಿಸ್ತರಣೆಗೊಂಡು 1981 ರಲ್ಲಿ ಸ್ವಂತ ಕಟ್ಟಡದ ರೂಪ ಪಡೆದುಕೊಂಡಿತ್ತು. ಮುಂದೆ sweet stall, ರೆಸ್ಟೋರೆಂಟ್, ಐಸ್ ಕ್ರೀಂ ಪಾರ್ಲರ್, ಪದ್ಮಾವತಿ ಕಲ್ಯಾಣ ಮಂಟಪ, ಬೇಕರಿ ಉತ್ಪನ್ನಗಳ ಮಳಿಗೆ,ಫಲಹಾರ ಮಂದಿರ ಹಂತ ಹಂತವಾಗಿ ಪ್ರಾರಂಭವಾಯಿತು.
ಪಾರಿಜಾತ ಹೋಟೆಲಿನ ಸ್ಥಾಪಕರಾದ ಶ್ರೀ ರಾಮಚಂದ್ರ ಭಟ್ ರವರು ಪ್ರಾತಃಕಾಲದಲ್ಲಿ ಎದ್ದು ತಾವೇ ಖುದ್ದಾಗಿ ಖಾರಬಾತ್, ಕೇಸರಿ ಬಾತ್ ತಯಾರಿಸುತ್ತಿದ್ದರು ಇತರ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಮುತುವರ್ಜಿ ವಹಿಸಿಕೊಳ್ಳುತ್ತಿದ್ದರ ಪರಿಣಾಮವಾಗಿ ಪಾರಿಜಾತ ಹೋಟೆಲಿನ ತಿಂಡಿ ತಿನಿಸುಗಳು, ಖಾದ್ಯಗಳು ಮತ್ತು ಇತರ ಸಾಂಬಾರು ತಯಾರಿಕ ಉತ್ಪನ್ನಗಳು ಜನಪ್ರಿಯಗೊಂಡವು.


ವಾರದ ಬೇರೆ ಬೇರೆ ದಿನಗಳಲ್ಲಿ ಗ್ರಾಹಕರ ಆಪೇಕ್ಷೆಯಂತೆ ವಿವಿಧ ತಿಂಡಿ ತಿನಿಸುಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಖುದ್ದು ಹೋಟೆಲ್ ಮಾಲೀಕರೇ ತಿಂಡಿ ಮತ್ತು ಇತರ ಖಾದ್ಯಗಳ ತಯಾರಿಕೆಯಲ್ಲಿ ಉಸ್ತುವಾರಿ ವಹಿಸಿಕೊಳ್ಳುವುದರಿಂದ ಪಾರಿಜಾತ ಬ್ರಾಂಡ್ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ ವಿದೇಶಗಳಲ್ಲಿರುವವರು ಊರಿಗೆ ಬಂದು ಮರಳಿ ಹೋಗುವಾಗ ಪಾರಿಜಾತದಲ್ಲಿ ತಯಾರಾದ ಬಾದಾಮಿ ಹಲ್ವಾ, ಸಾಂಬಾರ್ ಹುಡಿ, ಮಸಾಲೆ ಉತ್ಪನ್ನಗಳನ್ನು ಪಾರ್ಸೆಲ್ ತೆಗೆದುಕೊಂಡು ಹೋಗುತ್ತಾರೆ ಅಷ್ಟರ ಮಟ್ಟಿಗೆ ಪಾರಿಜಾತದ ತಿಂಡಿ ತಿನಿಸುಗಳು, ವಿವಿಧ ಖಾದ್ಯಗಳು, ಸಾಂಬಾರ್ ತಯಾರಿಕಾ ಉತ್ಪನ್ನಗಳು ಜನಪ್ರಿಯವಾಗಿದೆ.
ಸುಮಾರು 30 ಕ್ಕೂ ಹೆಚ್ಚು ಸಿಹಿ ತಿಂಡಿ ಉತ್ಪನ್ನಗಳ ಜೊತೆಗೆ ಕೋಡುಬಳೆ, ಚಕ್ಕುಲಿ ಮತ್ತು ಇತರ ಖಾರ ತಿಂಡಿಗಳನ್ನು ಇಲ್ಲಿ ತಯಾರಿಸಲಾಗುತ್ತಿದ್ದು, ಖಾದ್ಯ ಉತ್ಪನ್ನಗಳಿಗೆ ಮತ್ತು ಸಾಂಬಾರ್ ಉತ್ಪನ್ನಗಳಿಗೆ ದೇಶ ವಿದೇಶಗಳಲ್ಲಿ ಅಪಾರ ಬೇಡಿಕೆ ಇದೆ.
ತಂದೆಯಾದ ರಾಮಚಂದ್ರ ಭಟ್ ರವರ ಮಾರ್ಗದರ್ಶನದಲ್ಲಿ ಹೋಟೆಲ್ ತಿಂಡಿ ತಯಾರಿಕೆ ಮತ್ತು ನಿರ್ವಹಣೆಯಲ್ಲಿ ಪಳಗಿದ ಮಗ ಗಣೇಶ್ ಭಟ್ ರವರು ತಂದೆಯವರ ನಿಧನದ ನಂತರ ಪಾರಿಜಾತ ಹೋಟೆಲಿನ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.

ಕಳೆದ 26 ವರ್ಷಗಳಿಂದ ಕುಂದೇಶ್ವರ ದೀಪೋತ್ಸವದ ಸಮಯದಲ್ಲಿ ಆಹಾರ ಮೇಳವನ್ನು ಪಾರಿಜಾತ ಹೋಟೆಲಿನ ಸಾರಥ್ಯದಲ್ಲಿ ಯಶಸ್ವಿಯಾಗಿ ಆಯೋಜಿಸುತ್ತಾ ಬರಲಾಗಿದೆ. ನ್ಯು ಪಾರಿಜಾತ ರೆಸ್ಟೋರೆಂಟ್, ಐಸ್ ಕ್ರೀಂ ಪಾರ್ಲರ್, ಜ್ಯೂಸ್ ಸೆಂಟರ್ ಉದ್ಯಮದಿಂದ ಗಳಿಸಿದ ಸಂಪಾದನೆಯಿಂದ ಬಂದ ಹಣದಲ್ಲಿ ಒಂದಿಷ್ಟು ಪಾಲು ಸಮಾಜಸೇವೆಗೆ ಕೊಡಬೇಕು ಎಂಬ ಕಾಳಜಿಯಿಂದ ಈ ಹೋಟೆಲ್ ಮಾಲೀಕರ ಕುಟುಂಬ ಧಾರ್ಮಿಕ, ಸಾಂಸ್ಕೃತಿಕ, ಶಿಕ್ಷಣ ಮತ್ತು ಪರಿಸರ ಸಂಬಂಧಿ ವಿಚಾರಗಳಿಗಾಗಿ ನೆರವಿನ ಹಸ್ತ ನೀಡುತ್ತಾ ಬಂದಿದೆ.
ಸುರಲೋಕದ ಪಾರಿಜಾತ ವೃಕ್ಷವನ್ನು ಶ್ರೀ ಕೃಷ್ಣ ಭೂಮಿಗೆ ತಂದಂತೆ ಶ್ರೀ ರಾಮಚಂದ್ರ ಭಟ್ ರವರು ಪಾರಿಜಾತ ಹೋಟೆಲ್ ನ್ನು ಕುಂದಾಪುರದಲ್ಲಿ ಸ್ಥಾಪಿಸಿ ಇಡೀ ಜಗತ್ತಿನಾದ್ಯಂತ ಅದರ ಕಂಪನ್ನು ಪಸರಿಸಿದರು. ಕುಂದಾಪುರದಲ್ಲಿ ಒಳ್ಳೆಯ ಹೋಟೆಲ್ ಯಾವುದು ಎಂದು ಯಾರಾದರೂ ಕೇಳಿದರೆ ಯಾವುದೇ ಮುಚ್ಚುಮರೆ ಇಲ್ಲದೇ ನೇರವಾಗಿ ನ್ಯು ಪಾರಿಜಾತದತ್ತ ಬೊಟ್ಟು ಮಾಡಿ ತೋರಿಸಬಹುದು ನಿಜಕ್ಕೂ ನ್ಯೂ ಪಾರಿಜಾತ ಹೋಟೆಲ್ ಸ್ವಾದಿಷ್ಟಕರ ತಿಂಡಿ ತಿನಿಸುಗಳ ಭೂಸ್ವರ್ಗ ಎಂದು ವಿಶ್ವಾಸಭರಿತ ಧ್ವನಿಯಲ್ಲಿ ಹೇಳಬಹುದು.
ಆತ್ಮೀಯರಾದ ಶ್ರೀ ಗಣೇಶ್ ಭಟ್ ರವರ ಸಾರಥ್ಯದಲ್ಲಿ “ಟೀಮ್ ಪಾರಿಜಾತ” ಎಂಬ ಚೇತೋಹಾರಿ ಕಾನ್ಸೆಪ್ಟ್ ರಚಿಸಲಾಗಿದ್ದು, ಇದರ ಮೂಲಕ ಊರ ಪರವೂರ ಗ್ರಾಹಕರಿಗೆ ಮತ್ತಷ್ಟು ಉತ್ತಮ ಸೇವೆಸಲ್ಲಿಸುವಂತಾಗಲಿ ಎಂದು ಹಾರೈಸುವ.
ಸುಧಾಕರ ಕುಂದಾಪುರ
ಕುಂದಾಪುರ.ಕಾಮ್














