ಉಸಿರಿಗೆ ಚೈತನ್ಯ ನೀಡುವ ಹಸಿರು ಸಾಮ್ರಾಜ್ಯ ಬೈಂದೂರಿನ ಕರ್ನಾಟಕ ನರ್ಸರಿ

kundapuradotcom@gmail.com
3 Min Read

ಕುಂದಾಪುರದಿಂದ ಭಟ್ಕಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಬೈಂದೂರು ಒತ್ತಿನೆಣೆ ಸಮೀಪ ಬಣ್ಣ ಬಣ್ಣದ ಫಲಪುಷ್ಪ ಗಿಡಗಳ ಹಸಿರು ಸಾಮ್ರಾಜ್ಯ ನಮ್ಮ ಕಣ್ಮನ ಸೆಳೆಯುತ್ತದೆ.ಅದುವೇ ವೈವಿಧ್ಯಮಯ ಸಸ್ಯಕಾಶಿವೆನಿಸಿರುವ ಸಸ್ಯ ಉತ್ಪಾದನಾ ಮತ್ತು ಮಾರಾಟ ಕೇಂದ್ರವಾಗಿರುವ ಕರ್ನಾಟಕ ಫಾರ್ಮ್. ಸುಮಾರು 3 ಎಕರೆಗೂ ಹೆಚ್ಚು ವಿಸ್ತೀರ್ಣದ ಈ ನರ್ಸರಿ ಬೇರೆ ನರ್ಸರಿಕ್ಕಿಂತ ಏಕೆ ವಿಭಿನ್ನ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ನರ್ಸರಿಗಳಲ್ಲಿ ಪ್ರಾಥಮಿಕ ಹಂತದ ಸಸ್ಯಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಪದ್ಧತಿ ಇದೆ.ಈ ಗಿಡಗಳು ದೊಡ್ಡದಾಗಿ ಫಲ ಬಿಡುವ ಹೊತ್ತಿಗೆ ಕೆಲವು ವರ್ಷಗಳು ಕಾಯಬೇಕಾಗುತ್ತದೆ.ಆದರೆ ಕರ್ನಾಟಕ ನರ್ಸರಿಯಲ್ಲಿ ಕಾಯುವಿಕೆಯ ಹಂಗಿಲ್ಲದ ರೆಡಿ ಪ್ರಾಡಕ್ಟ್ ಶೈಲಿಯ ಫಲಭರಿತ ಹಣ್ಣು ಹಂಪಲು,ಫಲಪುಷ್ಪಗಳ ಗಿಡಗಳು ಯಾವಾಗಲೂ ಲಭ್ಯವಿರುತ್ತದೆ.ಇಲ್ಲಿ ವೈಟಿಂಗ್ ಫೀರಿಯಡ್ ಪ್ರಮೇಯವೇ ಇಲ್ಲ.ಇದು ಕರ್ನಾಟಕ ನರ್ಸರಿಯ ಸ್ಪೆಷಾಲಿಟಿ.

ಸ್ವದೇಶಿ ಮತ್ತು ವಿದೇಶಿ ಫಲಪುಷ್ಪ ಗಿಡಗಳು ಇಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಲಭ್ಯವಿದೆ.ಸುಮಾರು ಎಪ್ಪತ್ತು ಜಾತಿಯ ಹಲಸಿನ ಹಣ್ಣಿನ ಗಿಡಗಳು ಇಲ್ಲಿ ಲಭ್ಯವಿದ್ದು,ಆರು ತಿಂಗಳಿಗೆ ಹಣ್ಣು ಬಿಡುವ ಹಲಸಿನ ಗಿಡ ಹಾಗೂ ಕೆಂಪು ಹಲಸಿನ ಗಿಡ ಇಲ್ಲಿ ಆಕರ್ಷಿಸುತ್ತದೆ. ವಿದೇಶಿ ಹಣ್ಣಿನ ಗಿಡಗಳಾದ ಡ್ರ್ಯಾಗನ್ ಪ್ರುಟ್, ರಂಬುಟಾನ್, ಥ್ಯಾಲೆಂಡ್ ಪೇರಳೆ, ಲಿಂಬೆಹಣ್ಣಿನ ಗಿಡಗಳು ಕೂಡಾ ಈ ನರ್ಸರಿಯಲ್ಲಿ ಲಭ್ಯವಿದೆ. ಅಸಂಖ್ಯಾತ ದೇಶ ವಿದೇಶದ ಅಲಂಕಾರಿಕ ಗಿಡಗಳು, ಹೂವಿನ ಗಿಡಗಳ ಸಾಮ್ರಾಜ್ಯವೇ ಇಲ್ಲಿದ್ದು, ಕಣ್ಣು ಹಾಯಿಸಿದಷ್ಟೂ ವರ್ಣರಂಜಿತವಾಗಿ ಸೆಳೆಯುತ್ತದೆ. ವಿಶೇಷವೆಂದರೆ 1 kg ಗೆ 2.5 ಲಕ್ಷ ಬೆಲೆ ಇರುವ ಮಾವಿನ ಹಣ್ಣಿನ ವಿಶಿಷ್ಟ ತಳಿಯ ಜಪಾನಿನ ಮಾವಿನ ಗಿಡ ಇಲ್ಲಿದೆ. ಮನುಷ್ಯನ ಆರೋಗ್ಯ ವರ್ಧಕ ಔಷಧೀಯ ಗಿಡಗಳು ಕೂಡಾ ಇಲ್ಲಿ ಲಭ್ಯವಿದ್ದು, ಅದರ ಬಗ್ಗೆ ನರ್ಸರಿ ಮಾಲೀಕರು ಗ್ರಾಹಕರಿಗೆ ಕೂಲಂಕಷವಾಗಿ ಮಾಹಿತಿ ನೀಡುತ್ತಾರೆ.

ಮತ್ತೊಂದು ವಿಶೇಷವೆಂದರೆ ಚಿರಯೌವನ್ವವನ್ನು ಕಾಪಾಡುವ ಥಾಯ್ಲೆಂಡ್ ಮೂಲದ ಗ್ಯಾಕ್ ಹಣ್ಣಿನ ಬಳ್ಳಿ ಸಸ್ಯ ಇಲ್ಲಿ ದೊರಕುತ್ತದೆ. ಈ ಬಳ್ಳಿ ಸಸ್ಯಕ್ಕೆ 1500 ರೂ ಬೆಲೆ ಇದ್ದು ಇದರಿಂದ ಮಾಡಿದ ಔಷಧಿಗೆ ರೂ.20000 ಬೆಲೆ ಇರುತ್ತದೆ. ಮುಖದಲ್ಲಿ ನೆರಿಗೆ ಮೂಡದಂತೆ ಯೌವ್ವನವನ್ನು ಕಾಪಾಡಿಕೊಳ್ಳಲು ಥಾಯ್ಲೆಂಡ್ ಜನರು ಗ್ಯಾಕ್ ಹಣ್ಣಿನ ಎಣ್ಣೆಯನ್ನು ಬಳಸುತ್ತಾರೆ ಎಂಬುದು ಇಲ್ಲಿ ಉಲ್ಲೇಖನೀಯ. ತಮ್ಮ ಫಾರ್ಮ್ ನಲ್ಲಿ ಪ್ರಾಯೋಗಿಕ ಕೃಷಿ ನಡೆಸಿ ಒಳ್ಳೆಯ ಫಲಿತಾಂಶ ಬಂದ ಬಳಿಕವೇ ಗಿಡಗಳನ್ನು ಮಾರಾಟ ಮಾಡುವುದು ಕರ್ನಾಟಕ ನರ್ಸರಿಯ ವಿಶೇಷತೆ. ಕರ್ನಾಟಕ ನರ್ಸರಿಯ ಎಷ್ಟೊಂದು ಪ್ರಸಿದ್ಧಿ ಪಡೆದಿದೆ ಎಂದರೆ ದೆಹಲಿಯಿಂದಲೂ ಗ್ರಾಹಕರು ಇಲ್ಲಿಗೆ ಬಂದು ಲೋಡುಗಟ್ಟಲೆ ಗಿಡಗಳನ್ನು ತೆಗೆದುಕೊಂಡು ಹೋಗಿದ್ದಾರೆ. ದೆಹಲಿಯ ಈ ಗ್ರಾಹಕರು ಗಿಡಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಲು Transport ವೆಚ್ಚ 1 ಲಕ್ಷ ಎಂಬತ್ತು ಸಾವಿರ ಖರ್ಚು ಮಾಡಿದ್ದಾರೆ.

ಗಿಡಗಳ ಬಗ್ಗೆ ಅಪಾರ ಆಸಕ್ತಿ ಇರುವ ಈ ಗ್ರಾಹಕರು ಈ ನರ್ಸರಿಯ ಗಿಡಗಳ ಗುಣಮಟ್ಟದ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈಗಾಗಲೇ ತಮಿಳುನಾಡು, ಮಹಾರಾಷ್ಟ್ರಗಳಲ್ಲೂ ಕರ್ನಾಟಕ ನರ್ಸರಿ ಸ್ಥಾಪಿಸಲಾಗಿದ್ದು ಕರ್ನಾಟಕದ ಮೇಲಿನ ಅಪಾರ ಅಭಿಮಾನದಿಂದ ಈ ನರ್ಸರಿ ಮಾಲೀಕರು ಅಲ್ಲೂ ಕೂಡಾ ಕರ್ನಾಟಕ ಫಾರ್ಮ್ ಎಂದೇ ಹೆಸರು ಇಟ್ಟಿದ್ದಾರೆ ಎಂಬುದು ತುಂಬಾ ಖುಷಿಯ ವಿಚಾರ. ನರ್ಸರಿ ಮಾಲೀಕರ ಪುತ್ರ ಮೆಲ್ಬಿನ್ ಚಾಕೋ ತನಗೆ ಬಂದ IT ಉದ್ಯೋಗದ ಆಫರ್ ಬಿಟ್ಟು ತಂದೆ ಮುಂದುವರಿಸಿಕೊಂಡು ಬಂದ ಈ ನರ್ಸರಿ ಉದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಅಚ್ಚ ಕನ್ನಡದಲ್ಲಿ ಬಹಳ ಸ್ವಚ್ಛವಾಗಿ ಮತ್ತು ನಿರರ್ಗಳವಾಗಿ ಮಾತನಾಡಿ ಗ್ರಾಹಕರಿಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ.

ಕೃಷಿಯಲ್ಲಿ ಅಪಾರ ಪರಿಣಿತಿ ಹೊಂದಿರುವ ಕರ್ನಾಟಕ ನರ್ಸರಿ ಮಾಲೀಕರು ವಿವಿಧ ತಂತ್ರಜ್ಞಾನ ಉಪಯೋಗಿಸಿ ಉತ್ತಮ ಗುಣಮಟ್ಟದ ಸಸ್ಯಗಳನ್ನು ಬೆಳೆಸುತ್ತಾರೆ. ಇವರು ಬೆಳೆಸಿದ ಗಿಡಗಳಿಗೆ ರಾಷ್ಟ್ರದಂತ್ಯ ಅಪಾರವಾದ ಬೇಡಿಕೆ ಇದೆ. ಈ ನರ್ಸರಿಯ ಮಾಲೀಕರಾದ ಶ್ರೀ ಬೆನ್ನಿ ಚಾಕೋ ಮೂಲತಃ ಕೇರಳದವರಾಗಿದ್ದು ಹಲವು ವರ್ಷಗಳಿಂದ ಬೈಂದೂರುನಲ್ಲಿ ನೆಲೆಸಿದ್ದಾರೆ. ಕೃಷಿ ಪ್ರೇಮಿ ಮತ್ತು ಕೃಷಿ ತಜ್ಞರಾದ ಅವರು ಬೈಂದೂರಿನಲ್ಲಿ ಸಮೃದ್ಧ ಹಸಿರು ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಈ ನರ್ಸರಿಯಲ್ಲಿ ಸುಧಾರಿತ ತೋಟಗಾರಿಕೆ ಕ್ಷೇತ್ರಕ್ಕೆ ಬೇಕಾಗುವ ಕೃಷಿ ಪರಿಕರಗಳು ಲಭ್ಯವಿದ್ದು,ಮಾಲೀಕರಾದ ಶ್ರೀ ಬೆನ್ನಿ ಚಾಕೋರವರು ಗ್ರಾಹಕರಿಗೆ ಗಿಡಗಳ ಬೆಳವಣಿಗೆ ಮತ್ತು ಸಂರಕ್ಷಣೆ ಬಗ್ಗೆ ತಮ್ಮ ಅಪಾರ ಅನುಭವವದ ಸಲಹೆಗಳನ್ನು ಧಾರೆಯೆರೆದು ಕೊಡುತ್ತಾರೆ. ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಮನೆ ಪರಿಸರವನ್ನು ಹಸಿರಾಗಿಸಿ ಎಂಬುದು ಕರ್ನಾಟಕ ಫಾರ್ಮ್ ನ ಘೋಷ ವಾಕ್ಯವಾಗಿದ್ದು,ಈ ಮಾತುಗಳು ಇಲ್ಲಿ ಅದ್ಭುತವಾಗಿ ಸಾಕಾರಗೊಂಡಿರುವುದು ಸತ್ಯವಾಗಿದೆ. ಉಸಿರಿಗೆ ಚೈತನ್ಯ ನೀಡುವ ಹಸಿರು ಸಾಮ್ರಾಜ್ಯ ಬೈಂದೂರಿನ ಕರ್ನಾಟಕ ನರ್ಸರಿ

ವರದಿ: ಸುಧಾಕರ ಕುಂದಾಪುರ
www.kundapura.com

Share This Article
Leave a Comment