ಪ್ರತಿಭಾನ್ವಿತೆ ಸಹನಾ ಅನಂತ್ ಗಂಗೊಳ್ಳಿ ಎಂಬ ಭರತನಾಟ್ಯ ಕಲಾವಿದೆ

kundapuradotcom@gmail.com
2 Min Read

ಭರತನಾಟ್ಯ ನನ್ನ ಬದುಕಿನ ಅವಿಭಾಜ್ಯ ಅಂಗ: ಸಹನಾ ಅನಂತ್ ಗಂಗೊಳ್ಳಿ ಬಾಲ್ಯ ದಿಂದಲೂ ಭರತನಾಟ್ಯ ಎಂದರೆ ಈಕೆಗೆ ಅದಮ್ಯ ಪ್ರೀತಿ ಕಣ್ಣರಳಿಸಿ ಬೆರಗಾಗಿ ನೋಡುತಿದ್ದ ಈ ಬಾಲೆ ಅಂದೇ ನಿರ್ಧರಿಸಿ ಬಿಡುತ್ತಾಳೆ ನಾನು ಭರತನಾಟ್ಯ ಕಲಾವಿದೆ ಆಗಿಯೇ ಆಗುವೆ ನಂತರ ಅವಳ ಕನಸಿಗೆ ನೀರೇರೆದು ಪೋಷಿಸಿದ್ದು ತಂದೆ ಮತ್ತು ತಾಯಿ. ಮಗಳ ಪ್ರತೀ ಹೆಜ್ಜೆಯಲ್ಲೂ ಗೆಜ್ಜೆಯ ನಾದವಾಗಿ ತಂದೆ ಅನಂತ್ ಗಂಗೊಳ್ಳಿ ಸಹಕರಿಸುತ್ತ ಬರುತ್ತಾರೆ.

ಮಗಳೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ತಂದೆಗೆ ಮಗಳ ನೃತ್ಯ ಖುಷಿ ನೀಡುತ್ತದೆ ಆಕೆಗೆ ನಾಟ್ಯ ಶಾಲೆಗೆ ಸೇರಿಸುತ್ತಾರೆ ಅಲ್ಲಿ ವಿದೂಷಿ ಪುಷ್ಪ ಕೃಷ್ಣ ಮೂರ್ತಿ ಅವರ ಪ್ರೀತಿಯ ಶಿಷ್ಯೆಯಾಗಿ ರೂಪುಗೊಂಡ ಸಹನಾ ಗಂಗೊಳ್ಳಿ ನೃತ್ಯ ದ ಎಲ್ಲಾ ಪಟ್ಟುಗಳನ್ನು ಶ್ರಮದಿಂದ ಮೈಗೂಡಿಸಿ ಕೊಳ್ಳುತ್ತಾಳೆ ನೃತ್ಯ ಸ್ವರೂಪಿಣಿ ವೀಣಾ ಧಾರಿಣಿ ಶಾರದಯೇ ಧರೆಗೆ ಇಳಿದಂತೆ ನೃತ್ಯ ಮಾಡುತಿದ್ದ ಸಹನಾ ಎಂಬ ಚಂದದ ನೃತ್ಯಗಾರ್ತಿಯ ಹಾವ ಭಾವಕ್ಕೆ ಜನಸಾಗರ ಕೈ ಜೋಡಿಸಿ ನಮಿಸಿ ಚಪ್ಪಾಳೆ ಹೊಡೆದಾಗ ಸಹನಾಳ ನಯನಗಳು ಆನಂದ ಭಾಷ್ಪ ದಿಂದ ತೇವಗೊಳ್ಳುತ್ತದೆ.

“ನಮ್ಮ ಕಲೆ ಬೆಳೆಯಬೇಕು, ಇದು ದೇವ ಕಲೆ ಒಲಿಯ ಬೇಕಾದರೆ ದೇವರ ಆಶೀರ್ವಾದ ಬೇಕು ಆ ಆಶೀರ್ವಾದ ನನಗೆ ಲಭಿಸಿದೆ ಭರತನಾಟ್ಯದಲ್ಲಿ ನಾನು ಸಂತೋಷ ಕಾಣುತ್ತಿದ್ದೇನೆ ಈ ಕಲೆಯ ಸೊಗಸೇ ಅವರ್ಣನಿಯ” ಎನ್ನುತ್ತಾರೆ ವಿನಯವಾಗಿ ಕಲಾವಿದೆ ಸಹನಾ ಅನಂತ್ ಗಂಗೊಳ್ಳಿ ಬೆಂಗಳೂರು ದೂರ ದರ್ಶನದಲ್ಲಿ B ಗ್ರೇಡ್ ಕಲಾವಿದೆ. ರಾಜ್ಯದ ಪ್ರತಿಷ್ಠಿತ ವೇದಿಕೆಯಲ್ಲಿ ಇವರ ನೃತ್ಯ ವೈಭವ ಮೆರೆದಿದೆ.

ಗುರು ವಿದೂಷಿ ಪುಷ್ಪಾ ಕೃಷ್ಣಮೂರ್ತಿಯವರಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆ ಹಾಗೂ ಗುರು ವಿದೂಷಿ ರೂಪ ಶ್ರೀ ಮಧೂಸೂಧನ್ ಅವರ ಮಾರ್ಗದರ್ಶನದಲ್ಲಿ ವಿದ್ವತ್ ಅಂತಿಮ ಪರೀಕ್ಷೆಯನ್ನು ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆಗೊಂಡಿರುತ್ತಾರೆ. ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಭರತನಾಟ್ಯ ನೃತ್ಯ ಸ್ಪರ್ಧೆಯಲ್ಲಿ ನೃತ್ಯ ಪ್ರದರ್ಶನ. ಬೀದರ್ ನಲ್ಲಿ ವಿಟಿಯು ಆಯೋಜಿಸಿದ್ದ ವಿಶ್ವ ವಿದ್ಯಾಲಯ ಮಟ್ಟದ ಅಂತರ ಕಾಲೇಜು ಸ್ಪರ್ಧೆಯಲ್ಲಿ ಭಾಗವಹಿಸುವಿಕೆ. ಕನ್ನಡ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಮೂಹ ಪ್ರದರ್ಶನದಲ್ಲಿ ಭಾಗವಹಿಸುವಿಕೆ.

“ಹಲವಾರು ದೇವಸ್ಥಾನದಲ್ಲಿ ದೇವರ ಸನ್ನಿಧಿಯಲ್ಲಿ ನೃತ್ಯ ವಿಜೃಂಭಿಸಿದೆ ಭರತನಾಟ್ಯದಲ್ಲಿ ಅತ್ಯುನ್ನತ ಶ್ರೇಣಿ( distinction)ಯಲ್ಲಿ ಪದವಿ ಗಳಿಸಿದ ಸಹನಾ ಭರತನಾಟ್ಯದ ಪ್ರತಿಭಾನ್ವಿತ ಕಲಾವಿದೆಯಾಗಿ ಮೂಡಿಬಂದಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಸಹನಾ ಅನಂತ್ ಗಂಗೊಳ್ಳಿ ತನ್ನ ಕಲೆಯ ಮೂಲಕ ಗಮನ ಸೆಳೆದಿದ್ದಾಳೆ. ಇವರು ಗಂಗೊಳ್ಳಿಯ ದಿ. ಅಣ್ಣಪ್ಪ ಕಲೈಕಾರ್ ಮತ್ತು ದಿ. ಶ್ರೀಮತಿ ಸುಶೀಲ ಕಲೈಕಾರ್ ಇವರ ಮೊಮ್ಮಗಳಾಗಿರುತ್ತಾರೆ.

ನವರಾತ್ರಿಯ 9 ದಿನ ವಿವಿಧ ನವದುರ್ಗೆಯ ದೇವಸ್ಥಾನದಲ್ಲಿ ತನ್ನ ನೃತ್ಯ ಸೇವೆ ನೀಡಿ ಈ ಬಾರಿ ಗಮನ ಸೆಳೆದಿರುವ ಸಹನಾ, ಗಂಗೊಳ್ಳಿ ಶ್ರೀ ಮಹಾಕಾಳಿ ಅಮ್ಮನವರು ದೇವಸ್ಥಾನ, ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಹಾಗೂ ಕುಂದಾಪುರದ ಹಲವು ದೇವಸ್ಥಾನಗಳಲ್ಲಿ ನೃತ್ಯ ಸೇವೆ ನೀಡಿರುತ್ತಾರೆ.

ಶುಭಾಶಯಗಳು ಸಹನಾ
ರವಿಕುಮಾರ್ ಗಂಗೊಳ್ಳಿ

Share This Article
Leave a Comment