ಕುಂದಾಪುರ: ಕಾಂತಾರ-ಚಾಪ್ಟರ್ 1 ಚಿತ್ರ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ..ಟೈಟಲ್ ಕಾರ್ಡ್ನಿಂದ ಶುರುವಾದ ಶಿಳ್ಳೆ ಚಪ್ಪಾಳೆ ಕ್ಲೈಮ್ಯಾಕ್ಸ್ ತನಕ ಕಂಟಿನ್ಯೂ ಆಗಿತ್ತು.. ಫಸ್ಟ್ ಹಾಫ್ ತನಕ ಒಂದು ವೇಗವಾದ್ರೆ, ಸೆಕೆಂಡ್ ಹಾಫ್ ದಿಗ್ದರ್ಶನ ಮಾಡಿಸಿತ್ತು.. ಸೆಕೆಂಡ್ ಹಾಫ್ನ ಪ್ರತಿ ಸೀನ್ ಗೂ ಜನ ಶಿಳ್ಳೆ, ಚಪ್ಪಾಳೆ, ಜೈಕಾರದ ಮಳೆಗೈದಿದ್ರು.ಅಕ್ಷರಶಃ, ಈ ಪ್ರೇಕ್ಷಕರು ಹೇಳ್ತಿರೋದೆಲ್ಲ ನಿಜ.. ಕಾಂತಾರ ನಿರೀಕ್ಷೆಗೂ ಮೀರಿದ ಇತಿಹಾಸ ಬರೆದಿದ್ದು, ರಿಷಬ್ ಶೆಟ್ಟರ ಡಿವೈನ್ ಪರ್ಫಾಮೆನ್ಸ್, ಇಡೀ ಟೀಂ ಎಫರ್ಟ್ ತೆರೆ ಮೇಲೆ ರಾರಾಜಿಸ್ತಿದೆ.. ಅದರಲ್ಲೂ ಪ್ರೀ ಕ್ಲೈಮ್ಯಾಕ್ಸ್ ಹಾಗೂ ಕ್ಲೈಮ್ಯಾಕ್ಸ್ ಸಿನಿಮಾದ ಜೀವಾಳ ಆಗಿದ್ದು, ಪಂಜುರ್ಲಿ, ಗುಳಿಗ, ಶಿವ, ಚಾಮುಂಡಿ ಅವತಾರ ಥಿಯೇಟರನ್ನು ದೇಗುಲದಂತೆ ಬದಲಾಯಿಸಿ ಬಿಟ್ಟಿತ್ತು..ಒಟ್ಟಾರೆ ಕಾಂತಾರ ಟೀಂ ತಮ್ಮ ಮೇಲಿನ ನಂಬಿಕೆಯನ್ನ ಉಳಿಸಿಕೊಂಡಿದ್ದು, ದೇಶವ್ಯಾಪಿ ಮತ್ತೊಮ್ಮೆ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದೆ.


ಕದಂಬರ ಆಳ್ವಿಕೆಯ ಸಮಯವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೃಷ್ಟಿಯಾದ ಮಾಯಾವಿಲೋಕವಿದು. ಕಾಡಿನಿಂದ ಹೊರಬಂದು ಸರಿಯಾಗಿ ಊರನ್ನೇ ನೋಡದ, ಮನುಕುಲದ ಸಂಪರ್ಕವೇ ಇಲ್ಲದ ‘ಬೆರ್ಮೆ’ ಮತ್ತವನ ಸಂಗಡಿಗರು ಬಾಂಗ್ರಾ ರಾಜ್ಯಕ್ಕೆ ಕಾಲಿಡುತ್ತಾರೆ. ಬಾಂಗ್ರಾ ರಾಜ ಮನೆತನದ ಅರಸ ರಾಜಶೇಖರ ಮತ್ತು ಆತನ ಮಗ ಕುಲಶೇಖರನಿಗು ಹಾಗೂ ಈ ಕಾಂತಾರದ ಕಾಡಿಗೂ ಒಂದು ನಂಟಿದೆ. ಅಜ್ಜನ ಕಾಲದಿಂದಲೂ ದ್ವೇಷವಿದೆ. ಈಶ್ವರನ ಹೂದೋಟ ಎಂಬ ಸಣ್ಣ ಭಯವೂ ಇದೆ. ಬಾಂಗ್ರಾ ರಾಜ್ಯದ ಪರಿಚಯ, ಅಲ್ಲಿನ ಪಾತ್ರಗಳು, ಅವರ ಹಿನ್ನೆಲೆ, ವ್ಯಾಪಾರ, ‘ಬೆರ್ಮೆ’ ಮತ್ತವನ ಸಂಗಡಿಗರು ಈ ರಾಜ್ಯಕ್ಕೆ ಬಂದು ಇಲ್ಲಿನ ವೈಭವವನ್ನು ತುಂಬಿಕೊಳ್ಳುವ ಹೊತ್ತಿಗೆ ಚಿತ್ರದ ಮೊದಲಾರ್ಧ ಮುಗಿದಿರುತ್ತದೆ. ‘ಕಾಂತಾರ’ದ ಕ್ಲೈಮ್ಯಾಕ್ಸ್ ದೃಶ್ಯವೇ ಈ ಚಿತ್ರದ ಇಂಟರ್‌ವಲ್. ‘ಬೆರ್ಮೆ’ ದೈವದ ಮಗ ಎಂಬುದು ಇಲ್ಲಿ ಗೊತ್ತಾಗುತ್ತದೆ. ಕುಂದಾಪುರ ಹಕ್ಲಾಡಿಯ ಬಾಲ ಪ್ರತಿಭೆ ಸಮೀಕ್ಷಾ ಹಕ್ಲಾಡಿ ತೆರೆಯ ಮೇಲೆ ಪ್ರಥಮವಾಗಿ ಕಾಣಿಸಿಕೊಂಡು ಅದ್ಭುತ ಅಭಿನಯಕ್ಕೆ ಅಭಿಮಾನಿಗಳು ಬೆರಗಾಗಿದ್ದಾರೆ.


ಕುಂದಾಪುರದ ಪ್ರತಿಭಾನ್ವಿತೆ ಬಾಲ ಪ್ರತಿಭೆ ಯಾರು ಗೊತ್ತಾ?
ಕುಂದಾಪುರ ತಾಲೂಕಿನ ಸುರೇಶ್ ಹಕ್ಲಾಡಿ ಹಾಗೂ ಗೀತಾ ಅವರ ಮುದ್ದಿನ ಮಗಳಾದ ಸಮೀಕ್ಷಾ ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುತ್ತಾಳೆ.5ನೇ ತರಗತಿ ವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಕ್ಲಾಡಿಯಲ್ಲಿ 7ನೇ ತರಗತಿಯನ್ನು, ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯಲ್ಲಿ ಕಲಿಯುತ್ತಿದ್ದಾಳೆ.12ರ ವಯಸ್ಸಿನ ಈ ಬಾಲ ಪ್ರತಿಭೆ ಎಳೆ ಪ್ರಾಯದಲ್ಲಿ ಶಿಕ್ಷಣದ ಜೊತೆಗೆ ಇವಳು ತಾಂಡವಂ ಡಾನ್ಸ್ ಸ್ಟುಡಿಯೋದಲ್ಲಿ ಸೀನಿಯರ್ ವಿಭಾಗದಲ್ಲಿ ಡಾನ್ಸ್ ಕಲಿಯುತ್ತಿದ್ದಾಳೆ ಹಾಗೂ ಭರತನಾಟ್ಯವನ್ನು ಸೀನಿಯರ್ ವಿಭಾಗದಲ್ಲಿ ಶ್ರೀಮತಿ ವಿದುಷೀ ಭಾಗೀರಥಿ. ಎಮ್. ರಾವ್ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಶ್ರೀಮತಿ ಭಾಗ್ಯೇಶ್ವರಿ ಇವರಲ್ಲಿ ಕಲಿಯುತ್ತಿದ್ದಾಳೆ ಮತ್ತು ಯಕ್ಷಗಾನ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತೊಡಗಿರುತ್ತಾಳೆ.


ಅಭಿಮಾನಿಗಳಿಂದ ಸಮೀಕ್ಷಾಗೆ ಕೋಟೇಶ್ವರದಲ್ಲಿ ಅದ್ದೂರಿ ಸನ್ಮಾನ
ಇಂದು ಕೋಟೇಶ್ವರದಲ್ಲಿ 9:30 ರ ಶೋಗೆ ಸಮೀಕ್ಷಾ ಕುಟುಂಬದವರು ಚಲನಚಿತ್ರ ವೀಕ್ಷಣೆಗಾಗಿ ಬಂದಾಗ ಅಭಿಮಾನಿಗಳಿಂದ ಜೈಕಾರ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಅಭಿಮಾನಿಗಳಿಂದ ನಡೆದ ಸರಳ ಸನ್ಮಾನ ಸಮಾರಂಭದಲ್ಲಿ ವಕೀಲರಾದ ಮಂಜುನಾಥ ಗಿಳಿಯಾರ್ ಮಾತನಾಡಿ, ಸಮೀಕ್ಷಾ ಹಕ್ಲಾಡಿ ಅಪ್ಪಟ ಬಾಲ ಪ್ರತಿಭೆ ಪ್ರತಿಭಾವಂತೆಯಾದೆ ಈಕೆ ಕುಂದಾಪುರಕ್ಕೆ ಮತ್ತು ನಮಗೆಲ್ಲರಿಗೂ ಹೆಮ್ಮೆ ತಂದಿದ್ದಾಳೆ ಎಂದರು.
ಸಮೀಕ್ಷಾ ಹಕ್ಲಾಡಿ ತಂದೆ ಸುರೇಶ್ ಹಕ್ಲಾಡಿ ಮಾತನಾಡಿ, ಹೊಂಬಾಳೆ ಫಿಲಂ ಕಾಂತಾರದ ರಿಷಬ್ ಶೆಟ್ಟಿ ಮತ್ತು ಪ್ರಗತಿ ರಿಷಬ್ ಎಲ್ಲರೂ ಸೇರಿ ನನ್ನ ಮಗಳನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ವಕೀಲರಾದ ಟಿ ಮಂಜುನಾಥ ಗಿಳಿಯಾರ್, ಶಾಮ ಸುಂದರ್ ತೆಕ್ಕಟ್ಟೆ, ಕುಮಾರ್ ಕೋಟ ಸಿನಿಮಾ ಮಂದಿರದ ಮ್ಯಾನೇಜರ್ ಅಭಿಮಾನಿಗಳು ಉಪಸ್ಥಿತರಿದ್ದರು.













