ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಮತ್ತು ತಂಡ ನಿಮ್ಮನ್ನ ಆಮಂತ್ರಿಸುತ್ತಿದ್ದಾರೆ .

kundapuradotcom@gmail.com
1 Min Read

ಈ ವರ್ಷದ ಲಗೋರಿ ಕ್ರೀಡಾಕೂಟವನ್ನು ಮುಂದಿನ ಭಾನುವಾರ ಆಗಸ್ಟ್ 16ರಂದು ಕುಂದಾಪುರದ ಬೋರ್ಡ್ ಹೈ ಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ Aug 16 ಬೆಳಿಗ್ಗೆ 9ರಂದು ಕ್ರೀಡಾಕೂಟ ಅನಾವರಣಗೊಳ್ಳಲಿದೆ .11 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ವಿದ್ಯುಕ್ತವಾಗಿ ಲಗೋರಿ ಉದ್ಘಾಟನೆ ಸಮಾರಂಭ ನಡೆಯಲಿದೆ . ಹಗ್ಗ ಜಗ್ಗಾಟ ಮತ್ತು ಥ್ರೋಬಾಲ್ ಪಂದ್ಯಾಟವನ್ನು ಹೊರತುಪಡಿಸಿ ಉಳಿದ ಕ್ರೀಡೆಗಳು ಮುಗಿದ ತಕ್ಷಣವೇ ವಿಜೇತರಿಗೆ ಮೆಡಲ್ ಮತ್ತು ಸರ್ಟಿಫಿಕೇಟ್ ನೀಡಿ ಗೌರವಿಸಲಾಗುವುದು . ಸಂಜೆ ಕ್ರೀಡಾಕೂಟ ಮುಕ್ತಾಯವಾದ ಬಳಿಕ ಹಗ್ಗ ಜಗ್ಗಾಟ ಮತ್ತು ಥ್ರೋಬಾಲ್ ಪಂದ್ಯಾಟದ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ ಎಂದು ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು .

ಕುಂದಾಪ್ರ ಕನ್ನಡ ಮಾತನಾಡುವ ಭಾಷಾ ಪ್ರದೇಶಗಳಲ್ಲಿ ಹೇಗೆ ವಿಶಿಷ್ಟವಾದ ಶಬ್ದ ಬಳಕೆಯ ರೂಢಿ ಇದೆಯೋ ಅದೇ ರೀತಿಯಲ್ಲಿ ಕುಂದಾಪುರ ಕನ್ನಡ ಭಾಷಿಕ ಪ್ರದೇಶಗಳಲ್ಲಿ ವಿಶಿಷ್ಟವಾದ ಆಟಗಳು ಕೂಡ ರೂಡಿಯಲ್ಲಿತ್ತು. ಅಂತರಾಷ್ಟ್ರೀಯ ಕ್ರೀಡೆಗಳು ಮತ್ತು ಮೊಬೈಲ್ ಗೇಮ್ಸ್ ಗಳ ಗೀಳಿನ ಪ್ರಭಾವದಿಂದ ನಮ್ಮ ಪಾರಂಪರಿಕ ಕ್ರೀಡೆಗಳು ಕಣ್ಮರೆಯಾಗಬಾರದು ಎಂಬ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಕುಂದಾಪುರ ಕನ್ನಡ ಭಾಷಿಕ ಪ್ರದೇಶದಲ್ಲಿ ಪ್ರಚಲಿತ ಇರುವ ಗ್ರಾಮೀಣ ಕ್ರೀಡೆಗಳ ಆಟೋಟ ಸ್ಪರ್ಧೆಯನ್ನು ” ಲಗೋರಿ ” ಎಂಬ ಹೆಸರಿನಲ್ಲಿ ಆಯೋಜಿಸಲಾಗುತ್ತಿದೆ ಎಂದು ಕಿಶೋರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಾಮೋದರ ಫೈ , ರಾಜೇಶ್ ಕಾವೇರಿ ಹಾಗೂ ಕುಸುಮಕರ ಶೆಟ್ಟಿ ಉಪಸ್ಥಿತರಿದ್ದರು .

Share This Article
Leave a Comment
error: Content is protected !!